ಬಸವೇಶ್ವರ ಮೂರ್ತಿ ಭಗ್ನಗೊಳಿಸಿರುವ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

ವಿಜಯಪುರ, ನ.10-ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಬಿಜಗುಪ್ಪಿ ಗ್ರಾಮದಲ್ಲಿ ನಡೆದ ಶ್ರೀ ಜಗಜ್ಯೋತಿ ಬಸವೇಶ್ವರ ಮೂರ್ತಿ ಭಗ್ನಗೊಳಿಸಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮನ್ವಯ ಸಮಿತಿ ಹಾಗೂ ದಿ. ಬಿಜಾಪುರ ಹೆರ್ಟೆಜ್ ಫೌಂಡೇಶನ ಜಂಟಿ ಸಂಘಟನೆಗಳು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ ರಾಷ್ಟ್ರೀಯ ಮಹಾಪುರುಷರನ್ನು ಧಾರ್ಮಿಕ ದಾರ್ಶನಿಕರನ್ನು ಪೂಜಿಸುವ, ಗೌರವಿಸುವ ಸಂಸ್ಕøತಿ, ಸಂಪ್ರದಾಯ, ಪರಂಪರೆ ನಮ್ಮದು. ಇಂತಹ ಮಹಾನಭಾವರ ಮೂರ್ತಿಯನ್ನು ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವದೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿ ಸಮನ್ವಯ ಸಮಿತಿ ಅಧ್ಯಕ್ಷ ಅಡಿವೆಪ್ಪ ಸಾಲಗಲ್ಲ ಮಾತನಾಡಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಭಗ್ನಗೊಳಿಸಿರುವ ಆರೋಪಿಗಳು ಯಾವುದೇ ಪಕ್ಷದವರಿರಲಿ, ಯಾರೆ ಇರಲಿ ಅಂತವರನ್ನು ಗುರುತಿಸಿ ಜಿಲ್ಲಾಡಳಿತವು ಬೆಳಗಾವಿ ವಿಭಾಗೀಯ ಡಿ.ಐ.ಜಿ. ಅವರಿಗೆ ನಮ್ಮ ಮನವಿಯನ್ನು ಜಿಲ್ಲಾಡಳಿತವು ತಲುಪಿಸಿ ತೀವ್ರಗತಿಯಲ್ಲಿ ಆರೋಪಿಗಳನ್ನು ಬಂಧಿಸಬೇಕು ಎಂದರು.
ದಿ.ಬಿಜಾಪುರ ಹೆರ್ಟೆಜ್ ಫೌಂಡೇಶನ ಸಂಚಾಲಕರಾದ ಹಮ್ಜಾ ಮಹಿಬೂಬ ಅವರು ಮಾತನಾಡಿ ಮಹಾಮಾನವತಾವಾದಿ ಬಸವಣ್ಣನವರು ಜಗಕೆ ಮನುಕುಲದ ಒಳಿತಿಗಾಗಿ ದಿವ್ಯ ದಿಗ್‍ದರ್ಶಕರಾಗಿ ಬುಡಕಟ್ಟು ಜನಾಂಗವನ್ನು ಸಮಾನತೆಯಡೆಗೆ ತಂದಂತಹ ಅಪಮಾನ ಮಾಡುವ ದುಷ್ಕರ್ಮಿಗಳು ಎಷ್ಟೆ ಬಲಿಷ್ಟವಾಗಿದ್ದರು. ಮನುಕುಲಕ್ಕೆ ದ್ರೋಹ ಎಸಗಿದಂತಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಹೊನಗನಹಳ್ಳಿ ಅಧ್ಯಕ್ಷ ಶರಣಗೌಡ ಬಿರಾದಾರ, ನಗರ ಕಾರ್ಯದರ್ಶಿ ನಂದಾ ಮಾಶ್ಯಾಳ, ತಾಲೂಕು ಉಪಾಧ್ಯಕ್ಷ ಮಹಾದೇವಿ ತಾಂಬಾ, ಶಾಲಂಬಿ ನಾಲಬಂದ, ಮನೋಜ ಹೊಸಮನಿ, ಬಾಬು ಲಮಾಣಿ, ಬಾಸು ರಾಠೋಡ, ವಸಂತರಾವ ಕುಲಕರ್ಣಿ, ರಾಜಕುಮಾರ ವಾಗಮೊರೆ, ಕೃಷ್ಣಾಜಿ ಕುಲಕರ್ಣಿ, ಸಂತೋಷ ಕವಲಗಿ, ನದಿಮ ಇನಾಮದಾರ ಮುಂತಾದವರು ಉಪಸ್ಥಿತರಿದ್ದರು.