ಬಸವೇಶ್ವರ ಮೂರ್ತಿ ಅನಾವರಣ

ಬೀದರ್:ಏ.11: ತಾಲ್ಲೂಕಿನ ಚಿಮಕೋಡ್ ಗ್ರಾಮದಲ್ಲಿ ಇತ್ತೀಚಿಗೆ ಬಸವೇಶ್ವರ ಮೂರ್ತಿ ಅನಾವರಣ ಮಾಡಲಾಯಿತು.
ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಜಂಟಿಯಾಗಿ ಅನಾವರಣ ಮಾಡಿದರು.
ಬಸವಣ್ಣನವರು 12ನೇ ಶತಮಾನದಲ್ಲಿ ಸಮಾನತೆ ಸಮಾಜ ಕಟ್ಟಲು ಶ್ರಮಿಸಿದ್ದರು. ಜಗತ್ತಿಗೆ ಜೀವನ ಹಾಗೂ ಮಾನವೀಯ ಮೌಲ್ಯಗಳನ್ನು ನೀಡಿದ್ದರು ಎಂದು ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.
ಸುಂದರ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರ ತತ್ವಗಳ ಪಾಲನೆ ಅವಶ್ಯಕವಾಗಿದೆ ಎಂದು ಹೇಳಿದರು.
ಬಸವಣ್ಣನವರು ಮಹಾ ಮಾನವತಾವಾದಿ ಹಾಗೂ ಶ್ರೇಷ್ಠ ಸಮಾಜ ಸುಧಾರಕರಾಗಿದ್ದರು ಎಂದು ಡಾ. ಬಸವಲಿಂಗ ಅವಧೂತರು ತಿಳಿಸಿದರು.
ಯುವಕರು ದುಶ್ಚಟಗಳಿಂದ ದೂರ ಇರಬೇಕು. ಜೀವನ ಸಾರ್ಥಕಕ್ಕೆ ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಪ್ರಮುಖರಾದ ಸಂಗಮೇಶ ಬಿರಾದಾರ, ಸಂಜುಕುಮಾರ ಗಡ್ಡೆ, ಸಂತೋಷ ಕೋಡಗೆ, ನಾಗಶೆಟ್ಟಿ ಬಿರಾದಾರ, ನಾಗಶೆಟ್ಟಿ ಕಡಿದೊಡ್ಡೆ, ನಾಗೇಶ ಪಾಟೀಲ ಮತ್ತಿತರರು ಇದ್ದರು.