ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ

ಆಲಮೇಲ :ಜ.20: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿ ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ವಿಶ್ವಗುರು ಬಸವಣ್ಣನವರು ದೇಶಕ್ಕೆ ಅವರು ನೀಡಿದ ಅನುಭವ ಮಂಟಪವನ್ನು ನಿರ್ಮಿಸಿ ರಾಜ್ಯದ ಹಲವಾರು ಶರಣ ಸಂತರನ್ನು ಒಂದುಗೂಡಿಸಿ ಸಮಾನತೆಗಾಗಿ ತಮ್ಮ ಚಿಂತನೆಗಳನ್ನು ಬಿತ್ತರಿಸಿದ್ದು ಹೆಮ್ಮೆಯ ವಿಚಾರ ಎಂದು ಇಲ್ಲಿನ ಶ್ರೀಗಳಾದ ಮಲ್ಲಿಬೊಮ್ಮ ಮಹಾಸ್ವಾಮಿಗಳು ವಚನಗಳ ಮೂಲಕ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಬಸವೇಶ್ವರ ವೃತ್ತದಲ್ಲಿ ವಾಧ್ಯ ವೈಭವದಿಂದ ಬಸವ, ಬಸವ ಎಂಬ ಘೋಷಣೆಯೊಂದಿಗೆ ಅರ್ಜುಣಗಿ ಮಠದ ಸಂಗನಬಸವ ಶ್ರೀಗಳು ಬಸವೇಶ್ವರ ಮೂರ್ತಿಗೆ ಮಾರ್ಲಾಪಣೆ ಮಾಡಿ ಸಂಭ್ರಮಿಸಿದರು.
ಬಳಿಕ ನಾಗರೀಕ ವೇದಿಕೆಯ ಅಧ್ಯಕ್ಷರಾದ ರಮೇಶ್ ಭಂಟನೂರವರು ಬಸವಣ್ಣನವರ ಅನುಯಾಯಿಗಳೊಂದಿಗೆ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಇಡಿ ಜಗತ್ತಿಗೆ ಅನುಭವ ಮಂಟಪದ ಮೂಲಕ ಸಾಂಸ್ಕøತಿಕ, ಸಾಮಾಜಿಕ ಹಾಗೂ ರಾಜಕೀಯ ಚಿಂತನೆಗಳಿಗೆ ಸಮಾನತೆಗೆ ಹೊಸ ದಿಕ್ಕನ್ನು ತೋರಿಸಿದ ವಚನ ಚಳುವಳಿಯ ನಾಯಕತ್ವವನ್ನು ವಹಿಸಿದ ಬಸವಣ್ಣನವರನ್ನು ರಾಜ್ಯ ಸರ್ಕಾರ ಐತಿಹಾಸಿಕ ನಿರ್ಣಯಗಳನ್ನು ಮಂಡಿಸಿ ಕರ್ನಾಟಕದ ಸಾಂಸ್ಕøತಿಕ ನಾಯಕರೆಂದು ಘೋಷಣೆ ಮಾಡಿರುವುದರಿಂದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ದಾರಾಮ ಉಪ್ಪಿನ, ಬಿ.ಟಿ.ಪಾಟೀಲ, ಅಶೋಕ ಕೊಳಾರಿ, ನಾನಾಗೌಡ ಪಾಟೀಲ, ಜೈ ಭೀಮ್ ನಾಯ್ಕೊಡಿ, ಯಲ್ಲಪ್ಪ ದುರುಡ, ಅಬ್ದುಲ್ ವಹಾಬ್ ಸುಂಬುಡ, ಬಸವ ಅನುಯಾಯಿಗಳು ಇದ್ದರು.