ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಅ.16: ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ವಿಕೃತಿಗೊಳಿಸಿ ಅಪಮಾನ ಮಾಡಿರುವ ಘಟನೆ ಖಂಡಿಸಿ, ಪಟ್ಟಣದ ತಹಸೀಲ್ ಕಚೇರಿಯಲ್ಲಿ ಕರ್ನಾಟಕ ವಿದ್ಯಾರ್ಥಿ ವೇದಿಕೆ ಹಾಗೂ ಕನ್ನಡ ಸೇನೆ ವತಿಯಿಂದ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗೆ ಬರೆದ ಮನವಿ ಪತ್ರ ಗ್ರೇಡ್ -2 ತಹಸೀಲ್ದಾರ್ ಮಂಜುನಾಥ ಪಂಚಾಳಗೆ ಸಲ್ಲಿಸಲಾಯಿತು.
ಕನ್ನಡಪರ ಸಂಘಟನೆಯ ಮುಖಂಡರು ಮಾತನಾಡಿ, 12ನೇ ಬಸವಣ್ಣನವರು ಶತಮಾನದ ಶರಣರಲ್ಲಿ ಮುಂಚೂಣಿಯಲ್ಲಿ ಇರುವ ಮಹಾನ್ ಪುರುಷರಾಗಿದ್ದವರು.ಇಂತಹ ಮ ಹಾನ್ ಪುರುಷರ ಭಾವಚಿತ್ರಕ್ಕೆ ಕಿಡಿಗೇಡಿ ಗಳು ಅಪಮಾನ ಮಾಡಿರು ವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾ ಗಿದೆ. ಹೀಗಾಗಿ ಬಸವಣ್ಣ ನವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಮನೋಜ ಸೀತಾಳೆ, ಕನ್ನಡ ಸೇನೆ ಮುಂಖಂಡ ಸುಭಾಷಕೆನಡೆ, ಅರವಿಂದ ಜೋಗಿರೆ, ರಾಮು ಪರೀಟ್, ಶಿಖರೇಶ ಬಸಗುಂಡಿ, ಮಲ್ಲು ಸ್ವಾಮಿ ಕಲ್ಲೂರ, ಸಂಗಮೇಶ ಕೋಣಿ ಇದ್ದರು.