ಬಸವೇಶ್ವರ ಪ್ರತಿಮೆ ಭಗ್ನ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಚಿತ್ತಾಪುರ:ನ.13: 12ನೇ ಶತಮಾನದ ಕ್ರಾಂತಿ ಪುರುಷ, ಕಾಯಕಯೋಗಿ, ವಿಶ್ವಗುರು, ಜಗಜ್ಯೋತಿ, ಶ್ರೀ ಬಸವೇಶ್ವರ ಪ್ರತಿಮೆಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಮೂರ್ತಿಯನ್ನು ಭಗ್ನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣವಾದ ಶಿಕ್ಷೆಗೆ ಗುರಿಪಡಿಸಿ ಅವರನ್ನು ಗಡಿಪಾರು ಮಾಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ಶಿವರಾಜ್ ಪಾಟೀಲ್ ಬೆಳಗುಂಪಾ ಆಗ್ರಹಿಸಿದ್ದಾರೆ.

ಪಟ್ಟಣದ ಬಸವೇಶ್ವರ ವೃತ್ತದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಬಸವೇಶ್ವರ ಪ್ರತಿಮೆಗೆ ಭಗ್ನ ಮಾಡಿರುವುದು ಇದು ಇಡೀ ಮಾನವ ಕುಲಕ್ಕೆ ಮಾಡಿದ ಅವಮಾನವಾಗಿದೆ ಎಂದು ಹೇಳುತ್ತಾ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ರಾಜ್ಯದಾದ್ಯಂತ ಇರುವ ಶ್ರೀ ಬಸವೇಶ್ವರ ಪ್ರತಿಮೆಗಳಿಗೆ ಸೂಕ್ತ ಭದ್ರತೆ ಒದಗಿಸಿ, ಸಿಸಿಟಿವಿ ಅಳವಡಿಸುವಂತೆ ಹೇಳಿದರು.

ಈ ಕೃತ್ಯವನ್ನು ಖಂಡಿಸಿ ಮಾನ್ಯ ಘನವೆತ್ತ ರಾಜ್ಯಪಾಲರಿಗೆ ಬರೆದ ಪ್ರತಿಭಟನಾ ಮನವಿ ಪತ್ರವನ್ನು ಗ್ರೇಡ್ 2 ತಹಸೀಲ್ದಾರ್ ರವೀಂದ್ರ ಧಾಮಾ ಅವರ ಮುಖಾಂತರ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಜಗಣ್ಣಗೌಠ ಪಾಟೀಲ್, ಡಾ. ಚಂದ್ರಶೇಖರ್ ಕಾಂತ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರ, ಕೋಟೇಶ್ವರ ರೇಷ್ಮೆ, ಆನಂದ್ ಪಾಟೀಲ್, ಅಂಬರೀಶ್ ಸುಲೇಗಾವ್, ಅರವಿಂದ್ ನಿಪಣಿ, ಚಂದ್ರಶೇಖರ್ ವಾಟನೂರ, ರವೀಂದ್ರ ಸಜ್ಜನಶೆಟ್ಟಿ, ಚಂದ್ರಶೇಖರ್ ಅವಾಂಟಿ, ಪ್ರಕಾಶ್ ರೆಡ್ಡಿ ಮಾಲಿಪಾಟೀಲ್, ಜಗದೇವ ದಿಗ್ಗಾಂವಕರ್, ವಿಶ್ವನಾಥ್ ಗೌಡ ಅಲ್ಲೂರ್, ಚನ್ನವೀರ್ ಕಣಗಿ, ಸೇರಿದಂತೆ ಇತರರಿದ್ದರು.