ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ನಿವೇಶನ ನೀಡಿದಕ್ಕಾಗಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ

ಜೇವರ್ಗಿ: ಅ.30:ಪಟ್ಟಣದಲ್ಲಿ ವಿಶ್ವಗುರು ಜಗಜ್ಯೋತಿ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ವಾಗತ ಕೋರಿ ಇಂದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೊನ್ನ ವಿರಕ್ತಮಠ ಪೂಜ್ಯರಾದ ಡಾ.ಶಿವಾನಂದ ಸ್ವಾಮೀಜಿ ಹಾಗೂ ನೆಲೋಗಿ ಪೂಜ್ಯರಾದ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಹಾಗೂ ವಿವಿಧ ಪಕ್ಷದ ಮುಖಂಡರು ಹಾಗೂ ವಿವಿಧ ಸಂಘಟನೆಗಳು ಮತ್ತು ಬಸವಾಭಿಮಾನಿಗಳು ಸೇರಿ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು .
ಈ ಸಂಧರ್ಭದಲ್ಲಿ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿಗಳು ರಾಜ್ಯ ಸರಕಾರ ನಮ್ಮ ತಾಲೂಕಿನ ವೀರಶೈವ ಲಿಂಗಾಯತ ಸಮುದಾಯದ ಬಹು ದಿನಗಳ ಕನಸು ವಿಶ್ವಗುರು ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರಕಾರ ಹಳೇ ಎ.ಪಿ.ಎಂ.ಸಿ ಆವರಣದಲ್ಲಿ 100 *100 ಸ್ಥಳವನ್ನು ಮಂಜೂರು ಮಾಡಿದ್ದಕ್ಕಾಗಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹಾಗೂ ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಅವರಿಗೆ ಅಭಿನಂದನೆಗಳನ್ನು ಹೇಳಿದರು ಈ ಸಂದರ್ಭದಲ್ಲಿ ಸಮಾಜದ ನಾಯಕರಾದ ಬಸವರಾಜ ಪಾಟೀಲ ನರಿಬೋಳ.ರಾಜಶೇಖರ ಸೀರಿ.ವಿಜಯಕುಮಾರ ಹಿರೇಮಠ.ಬಾಪೂಗೌಡ ಪಾಟೀಲ.ವೀರಶೈವ ಸಮಾಜದ ಅಧ್ಯಕ್ಷ ಸಿದ್ದು ಅಂಗಡಿ. ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ.ರಮೇಶ ಬಾಬು ವಕೀಲ.ದಂಡಪ್ಪಗೌಡ ಕುಳಗೇರಿ.ಷಣ್ಮುಕಪ್ಪ ಗೋಗಿ.ಸಂಗಮೇಶ ಸಂಕಾಲಿ.ಗುರುಶಾಂತಯ್ಯ ಹಿರೇಮಠ.ರಾಜು ತಳವಾರ.ಆದಪ್ಪ ಸೀಕೆದ.ಬಸವರಾಜ ಸಾಸಾಬಾಳ.ಸಂಗನಗೌಡ ಗುಳ್ಯಾಳ.ಶಾಂತರಾಜ ನರಿಬೋಳ.ತಿಪ್ಪಣ್ಣ ಹಡಪಾದ.ನಾನಾಗೌಡ ಅಲ್ಲಾಪುರ.ಶರಣು ಕೋಳಕುರ.ಗುರುಲಿಂಗಯ್ಯ ಸ್ವಾಮಿ.ಮಲ್ಲಿಕಾರ್ಜುನ ಬಿರಾದಾರ.ಪ್ರಕಾಶ ಕೂಡಿ.ಅಶೋಕ ದಿವಾಣಿ.ಭೀಮು ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು