ಬಸವೇಶ್ವರ ನಾಮಫಲಕ ಕಟ್ಟೆ ನವೀಕರಣ

ಚಿಂಚೋಳಿ,ಮಾ 13: ತಾಲೂಕಿನ ಗಾರಂಪಳ್ಳಿ ಗ್ರಾಮದ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಜಗಜ್ಯೋತಿ ಬಸವೇಶ್ವರ ನಾಮ ಫಲಕ ಕಟ್ಟೆಯನ್ನು ನವೀಕರಣ ಮಾಡಲಾಯಿತು. ಬಸವೇಶ್ವರ ಮೂರ್ತಿಗೆ ಚಿಂಚೋಳಿಯ ಬಸವ ಸೇವಾ ಸಮಿತಿಯ ಅಧ್ಯಕ್ಷ ನೀಲಕಂಠ ಸೀಳಿನ್ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷ ಸಂಜೀವಕುಮಾರ ಪಾಟೀಲ, ಚಿಂಚೋಳಿಯ ಬಸವ ಸೇವಾ ಸಮಿತಿಯ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಗಾರಂಪಳ್ಳಿ ಗ್ರಾಮದ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ನೀಲಕಾಂತ್ ಸೆಲಿನ್, ಸಂಜು ಪಾಟೀಲ್, ಸಂಗನಬಸಯ್ಯ ಮಠ, ಬಸವರಾಜ್ ದೇಶಮುಖ, ಈಸಪ ಮಾಗಿ, ರಾಜಶೇಖರ್ ಮಾಗಿ, ಶರಣುಗೌಡ್ರು ನವೀನ್ ಪಾಟೀಲ್, ಅಣ್ಣು ಗಣಾಚಾರಿ ಪ್ರಮೋದಮಠ, ಅಣ್ಣಾರಾವ್ ಪಾಟೀಲ್, ಶಿವಕುಮಾರ್ ಮಲ್ಕುಡ್, ಗ್ರಾಮದ ಮುಖಂಡರಾದ ಸುಭಾಷ್ ಗುತ್ತೇದಾರ್, ಜಗಪ್ಪ ಹಡಪದ್, ಮೋಹನ್ ಗುತ್ತೇದಾರ್, ಹನುಮಂತ ಭೋವಿ ಇದ್ದರು