
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಇಲ್ಲಿನ ಬಸವೇಶ್ವರ ನಗರದ ನಾಗರಿಕರಿಂದ ಸಂಗಮೇಶ್ವರ ದೇವಸ್ಥಾನದಲ್ಲಿ 80 ವರ್ಷ ಜೀವನಸಾಗಿಸಿರುವ
ನಿವೃತ್ತ ಶಿಕ್ಷಕರಾದ ಸಿ.ಹೆಚ್.ಯಂ. ಬಸವರಾಜ, ಯಂ.ಶರಭಯ್ಯ ಮತ್ತು ಎಂ. ರಾಜೇಂದ್ರಗೌಡ ದಂಪತಿಗಳಿಗೆ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯ್ತು.
ಸನ್ಮಾನ ಸ್ವೀಕರಿಸಿದ ಸಿ.ಹೆಚ್.ಯಂ. ಬಸವರಾಜ ಅವರು ನಮ್ಮ ದಾರಿ ಸುಗಮ ವಾಗಬೇಕಾದರೆ ಶಾಂತಿ, ಧ್ಯಾನ, ಸದ್ವಿಚಾರ, ತೃಪ್ತಿ ಜೀವನ ಮುಖ್ಯವಾದದ್ದು. ಅತಿ ಆಸೆಗೆ ಹೋಗಬಾರದು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಸಾಲಮಾಡಿ ಮನಸ್ಸಿನ ನೆಮ್ಮದಿ ಕಳೆದುಕೊಳ್ಳಬೇಡಿ. ಹುಡುಗರಿದ್ದಾಗ ತಿಳಿದು ತಿಳಿಯದೋ ತಪ್ಪು ಮಾಡಿದ್ದರೆ ತಿದ್ದಿಕೊಂಡು ತಮ್ಮ ಗುರುಗಳ ಮಾತುಗಳನ್ನು ಪಾಲಿಸಿರಿ ಎಂದು ಬುದ್ದಿವಾದ ಹೇಳಿದರು.
ಸಂಗಮೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಹಾವಿನಾಳ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಎಸ್.ಯಂ.ಷಡಾಕ್ಷರಯ್ಯ, ಕನ್ನಡ ಸಾಹಿತ್ತ ಪರಿಷತ್ತ ಮಾಜಿ ಅಧ್ಯಕ್ಷ ಹಂಪನಗೌಡ, ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ ಮೊದಲಾದವರು ಶಿಕ್ಷಕರ ಸೇವೆ ಕುರಿತು ಮಾತನಾಡಿದರು.
ಎಸ್.ಎಲ್. ಮಹೇಶಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು , ಸ್ವಾಗತವನ್ನು ಕೆ.ಹೆಚ್.ಯಂ.ತಿಪ್ಪೇಸ್ವಾಮಿ, ವಂದನಾರ್ಪಣಿಯನ್ನು ಆರ್.ಹೆಚ್.ಯಂ.ಚನ್ನಬಸವಸ್ವಾಮಿ ಮಾಡಿದರು.