ಬಸವೇಶ್ವರ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಮತಯಾಚಿಸಿದ ಅಲ್ಲಂ ಪ್ರಶಾಂತ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.26: ಇಲ್ಲಿನ ಬಸವೇಶ್ವರ ನಗರದಲ್ಲಿ ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿಯೊಂದಿಗೆ ಪಕ್ಷದ ಯುವ ಮುಖಂಡ ಅಲ್ಲಂ ಪ್ರಶಾಂತ್ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ  ಮಾತನಾಡಿದ ಅವರು ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ರೂಪದಲ್ಲಿ ಎಲ್ಲಾ ಸಮುದಾಯಗಳನ್ನು ಸಮನಾಗಿ  ಕಾಣುವ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ಅದಕ್ಕಾಗಿ ಕಾಂಗ್ರೆಸ್ ಗೆ ಮತ ನೀಡಿ ದೇಶದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿ ಎಂದರು.
ಇವರೊಂದಿಗೆ ಪಕ್ಷದ ಮುಖಂಡರುಗಳಾದ  ಜೆ.ಎಸ್.ಆಂಜನೇಯಲು, ಜಾನೆಕುಂಟೆ ಬಸವರಾಜ್(ಕುಮ್ಮಿ), ಮುಂಡ್ರಿಗಿ ನಾಗರಾಜ, ಯಾಳ್ಪಿ ದಿವಾಕರಗೌಡ, ಶೋಭಾ ಕಾಳಿಂಗ, ವಿಷ್ಣು ಭೋಯಪಾಟಿ, ಎಂ.ರಾಜೇಶ್ವರಿ ಮೊದಲಾದವರು ಇದ್ದರು.