ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ: 1 ಲಕ್ಷ ದೇಣಿಗೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಏ.28: ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಟ್ಟೂರು ತಾಲೂಕಿನ ಹರಕನಾಳು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ 1.ಲಕ್ಷ ರೂ ಅನುದಾನ ಮಂಜೂರು ಮಾಡಿದ್ದಾರೆ.
ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಟ್ಟೂರು ತಾಲೂಕಿನ ಯೋಜನಾಧಿಕಾರಿ ಹೆಚ್.ಡಿ ನವೀನ್ ಕುಮಾರ್ ಹರಕನಾಳು ಗ್ರಾಮಕ್ಕೆ ಭೇಟಿ ನೀಡಿ ಬಸವೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷ ವಿ.ಭರಮಪ್ಪ ಅವರ ಕಡೆ 1 .ಲಕ್ಷ ರೂ.ನ ಡಿಡಿಯನ್ನು ವಿತರಿಸಿದರು.
ಈ ವೇಳೆ ಬಸವೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಜಿ. ಶಿವಾನಂದಪ್ಪ, ಊರಿನ ಮುಖಂಡರು ಎಂ. ಸಿದ್ದಪ್ಪ, ಜಿ. ನಾಗರಾಜ್, ಆರ್.ಬಿ ಉಮೇಶ್, ಯು.ವೀರೇಶ್ ಹಾಗೂ ಊರಿನ ಗಣ್ಯ ಮಾನ್ಯರು ಮತ್ತು ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಯೋಜಾನಾಕಚೇರಿಯ ಕೊಟ್ಟೂರು ವಲಯದ ಮೇಲ್ವಿಚಾರಕರು ವಿ.ಪಿ ನಾಗರಾಜ್, ಸ್ಥಳೀಯ ಸೇವಾ ಪ್ರತಿನಿಧಿ ಹಾಜರಿದ್ದರು.

One attachment • Scanned by Gmail