ಬಸವೇಶ್ವರ ದೇವಸ್ಥಾನ ಕಳಸಾರೋಹಣ

ವಿಜಯಪುರ, ನ.18-ಬಸವೇಶ್ವರ ದೇವಸ್ಥಾನ ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ವಾಸ್ತಿ ಶಾಂತಿ ಕಾರ್ಯಕ್ರಮವು ವಿಜಯಪುರ ತಾಲೂಕಿನ ಮಖಣಾಪೂರ ಗ್ರಾಮದಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 12 ರವರೆಗೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಸವನ ಬಾಗೇವಾಡಿ ಮತಕ್ಷೇತ್ರದ ಶಾಸಕರಾದ ಶಿವಾನಂದ ಎಸ್. ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತವು ಹಲವು ಧರ್ಮ, ಸಂಸ್ಕøತಿ, ಪರಂಪರೆಗಳನ್ನು ಹೊಂದಿಲ್ಲದಲ್ಲದೇ, ಧಾರ್ಮಿಕತೆಯಲ್ಲಿಯೂ ಹೆಸರಾಗಿದೆ. ಇದರಿಂದ ಆದಿ ಅನಾದಿಕಾಲದಿಂದಲೂ ಹೋಮ, ಹವನ ಮೂಲಕ ಜನರು ನೆಮ್ಮದಿ ಕಾಣುತ್ತಿದ್ದಾರೆ ಎಂದು ತಿಳಿಸಿದರು.
ನಾಗಠಾಣ ಮತಕ್ಷೇತ್ರದ ಶಾಸಕರಾದ ದೇವಾನಂದ ಚವ್ಹಾಣ ಅವರ ಸುಪುತ್ರ ಅಭಿನವ ಚವ್ಹಾಣ ಅವರು ಮಾತನಾಡಿ, ಧಾರ್ಮಿಕ, ಆಧ್ಯಾತ್ಮಿಕವು ಎಲ್ಲ ಜನ ಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದ್ದು, ಇವುಗಳನ್ನು ಇಂದಿನ ಯುವ ಪೀಳಿಗೆ ಮುಂದುವರೆಸಿಕೊಂಡು ಹೋಗುವ ಮೂಲಕ ಭಾರತದ ಪರಂಪರೆಯನ್ನು ಎತ್ತಿ ಹಿಡಿಯಬೇಕು ಎಂದರು.
ಕಾರ್ಯಕ್ರಮದ ಮುಂಚೆ ಪಲ್ಲಕ್ಕಿ ಉತ್ಸವ ಕುಂಭದೊಂದಿಗೆ ಶ್ರೀ ಬಸವೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆಯು ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಸಂಸ್ಥಾಪಕರಾದ ವಿಠ್ಠಲ ಮಾನಸಿಂಗ ರಾಠೋಡ ಇವರು ಅಧ್ಯಕ್ಷತೆ ವಹಿಸಿದ್ದರು. ಡಿ.ಎಲ್. ಚವ್ಹಾಣ, ಅಧ್ಯಕ್ಷರು ಬಂಜಾರಾ ಸಂಸ್ಥೆ, ಪ್ರಸಾದ ಡಿ. ಚವ್ಹಾಣ, ವಾಲು ಭಗತ್, ಅಪ್ಪುಗೌಡ ರಾ. ಪಾಟೀಲ, ವಿಶಾಲ ರಾಠೋಡ, ವಿಪುಲ ರಾಠೋಡ, ಇನ್ನಿತರ ಮಖಣಾಪೂರ ಗ್ರಾಮದ ಹಿರಿಯರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.