ಬಸವೇಶ್ವರ ಜಾತ್ರೆಯಲ್ಲಿ ಗಮನ ಸೆಳೆದ ಕಸರತ್ತಿನ ಸ್ಫರ್ಧೆ

ಬಸವನಬಾಗೇವಾಡಿ: ಸೆ.21:ಪಟ್ಟಣದ ಆರಾಧ್ಯ ದೈವ ಬಸವೇಶ್ವರ(ಮೂಲ ನಂದೀಶ್ವರ) ಜಾತ್ರೆಯ ಮೂರನೇ ದಿನವಾದ ಬುಧವಾರ ಬಸವೇಶ್ವರ ಅಂತರಾಷ್ಟ್ರೀಯ ಶಾಲೆಯ ಆವರಣದಲ್ಲಿ ಬಾರ ಎತ್ತುವ ಕಸರತ್ತಿನ ಸ್ಪರ್ಧೆ ನೋಡುಗರನ್ನ ರೋಮಾಂಚನಗೊಳಿಸುವಂತಿತ್ತು.
ಜಾತ್ರಾ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿರುವ ಈ ಸ್ಪರ್ಧೆಯಲ್ಲಿ ಸಂಗ್ರಾಣಿ ಕಲ್ಲ, ಎತ್ತುವದು, ಸಂಗ್ರಾಣಿ ಕಲ್ಲ ಸಾಗ ಹೊಡೆಯುವದು, ಗುಂಡಕಲ್ಲ ಎತ್ತುವದು, ಉಸುಕಿನ ಚೀಲ ಎತ್ತುವದು ಸೇರಿದಂತೆ ವಿವಿಧ ಕಸರತ್ತಿನ ಸ್ಪರ್ಧೆಗಳು ಜರುಗಿದವು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯ ವಿವಿಧ ಜಿಲ್ಲಿಗಳಿಂದ ಜಟ್ಟಿಗಳು ಸ್ಫರ್ಧೆಯಲ್ಲಿ ಭಾಗವಹಿಸಿರುವದು ವಿಶೇಷವಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಎಂ,ಜೆ ಆದಿಗೊಂಡ, ಮುಖಂಡ ಈರಣ್ಣ ಪಟ್ಟಣಶೆಟ್ಟಿ ಹಾಗೂ ಊರಿನ ಪ್ರಮುಖರ ನೇತೃತ್ವÀದಲ್ಲಿ ಸನ್ಮಾನಿಸಿ ಬೆಳ್ಳಿ ಕಡಗ ತೊಡಸಿ ಗೌರವಿಸಲಾಯಿತು. ಸ್ಪರ್ಧೆ ವಿಕ್ಷಿಸಲು ಆಗಮಿಸಿದ ಪ್ರೇಕ್ಷಕರು ಸಿಳ್ಳಿ ಕೇಕೆ ಚಪ್ಪಾಳೆ ಹೊಡೆಯುವ ಮೂಲಕ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು.
ಪ್ರೇಕ್ಷಕರ ಗಮನಸೆಳೆದ ನಿರೂಪಕ: ಕಸರತ್ತಿನ ಸ್ಪರ್ಧೆಯ ನಿರೂಪಣೆಯ ಜವಾಬ್ಧಾರಿ ಹೊತ್ತ ಊರಿನ ಹಿರಿಯಾದ ಬಸಪ್ಪಣ್ಣ ಹಾರಿವಾಳ ಅವರು ಗ್ರಾಮೀಣ ಬಾಷೆಯಲ್ಲಿಯೇ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತ ಮದ್ಯದಲ್ಲಿ ಹಾಸ್ಯ ಚಟಾಕಿ ಸಿಡಿಸುತ್ತ ನೆರೆದಿದ್ದ ಪ್ರೇಕ್ಷಕರನ್ನ ನಗೆ ಗಡಲಲ್ಲಿ ತೆಲಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರು: ಸಂಗ್ರಾಣಿ ಕಲ್ಲ ಸಾಗ ಎತ್ತುವ ಸ್ಪರ್ಧೆಯಲ್ಲಿ ಜತ್ತ ತಾಲೂಕಿನ ಆಸಂಗಿಯ ಅಫಜಲ್‍ಖಾನ ಮುಜಾವರ ಪ್ರಥಮ ಸ್ಥಾನ ಪಡೆದರೆ, ಕನಮಡಿಯ ರಫೀಕ ಮುಲ್ಲಾ ದ್ವಿತೀಯ, ಪೀರೊಜ ಮುಜಾವರ ತ್ರತೀಯ, ಸಂಗ್ರಾಣಿ ಕಲ್ಲ ವತ್ತಿ ಎತ್ತುವ ಸ್ಪರ್ಧೆಯಲ್ಲಿ ಶಿವಾನಂದ ಸಿದ್ದಪ್ಪ ಜಾಡನವರ, ದ್ವಿತೀಯ ವಿಠ್ಠಲ ಮುತ್ತಪ್ಪ ಮನಿಕಲ, ತ್ರತೀಯ ಮನೋಜ ಪರಶುರಾಮ ತಳವಾರ, ಗುಂಡು ಎತ್ತುವ ಸ್ಫರ್ಧೆಯಲ್ಲಿ ಶಿವಲಿಂಗಪ್ಪ ಭೀಮರಾಯ ಶಿವೂರ, ದ್ವಿತೀಯ ಭೀರಪ್ಪ ಗೋಳಪ್ಪ ಪೂಜಾರಿ, ತ್ರತೀಯ ಚಂದ್ರಶೇಖರ ಯಾಳವಾರ, ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಮಲ್ಲು ಹಣಸಾಗರ, ದ್ವಿತೀಯ ಸಂತೋಷ ಹಣಮಂತ ಇಟಗಿ, ತೃತೀಯ ಪ್ರವೀಣ ಶಿವೂರ, ಜೋಳದ ಚೀಲ ಎತ್ತುವ ಸ್ಫರ್ಧೆಯಲ್ಲಿ ಪ್ರಥಮ ಶ್ರೀಕಾಂತ ನಾಯಕ, ದ್ವಿತೀಯ ಬೀಮಣ್ಣ ಬಳಬಟ್ಟಿ, ಕರೇಪ್ಪ ಜಟ್ಟೆಪ್ಪ ಹೊಸಮನಿ, ತೃತೀಯ ಸ್ಥಾನ ಪಡೆದರು, ರಮೇಶ ಪಾಟೀಲ ಹಲ್ಲಿನಿಂದ ಹಾರಿ ನೆಗೆಯುವ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಜಾತ್ರಾ ಉತ್ಸವ ಸಮಿತಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಬಸವ ಸೈನ್ಯ ಕಾರ್ಯಕರ್ತರು, ಬಸವ ಸಮಿತಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.