ಬಸವೇಶ್ವರ ಜಾತ್ರೆಯಲ್ಲಿ ಅದ್ದೂರಿಯಾಗಿ ಜರುಗಿದ ಹಾಸ್ಯ ಸಂಜೆ ರಸಮಂಜರಿ

ಬಸವನಬಾಗೇವಾಡಿ:ಸೆ.21: ಪಟ್ಟಣದ ಆರಾಧ್ಯ ದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಗುರುವಾರ ಸಂಜೆ ಕಲಾ ಸಿಂಚಿನ ಮೆಲೋಡಿಸ್ ತಂಡದಿಂದ ಜರುಗಿದ ಹಾಸ್ಯ ಸಂಜೆ ಹಾಗೂ ರಸಮಂಜರಿ ಕಾರ್ಯಕ್ರಮವನ್ನ ವಿಕ್ಷೀಸಲು ಅಪಾರ ಸಂಖ್ಯಯ ಜನರ ಆಗಮಿಸಿರುವುದು ಕಂಡು ಬಂದಿತು.
ಪಟ್ಟಣದ ಶ್ರೀ ಬಸವೇಶ್ವರ ಅಂತರಾಷ್ಟ್ರೀಯ ಆಂಗ್ಲ ಮಾದ್ಯಮ ಶಾಲೆಯ ಆವರಣದಲ್ಲಿ ಸಂಜೆ 7 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿದ್ದು ಒಂದು ಗಂಟೆ ಮುಂಚಿತವಾಗಿಯೇ ಸಾರ್ವಜನಿಕರು ಆಗಮಿಸಿದ್ದು ಆವರಣದಲ್ಲಿ ಅಪಾರ ಸಂಖ್ಯಯ ಜನಜಂಗುಳಿ ಕಂಡು ಬಂದಿತ್ತು. ಕಾರ್ಯಕ್ರಮ ವಿಕ್ಷೀಸಲು ಅಪಾರ ಸಂಖ್ಯಯ ಮಹಿಳೆಯರು ಆಗಮಿಸಿರುವುದು ವಿಶೇಷವಾಗಿತ್ತು.
ಕಲಾವಿದ ಗೋಪಾಲ ಹೂಗಾರ ಹಾಗೂ ಗೋಪಾಲ ಇಂಚಗೇರಿ ನೇತೃತ್ವದಲ್ಲಿ ಕಲಾ ಸಿಂಚಿನ ಮೆಲೋಡಿಸ್ ತಂಡದಿಂದ ಕಾರ್ಯಕ್ರಮ ಆಯೋಜನೆಗೊಂಡಿದ್ದು ಕಾರ್ಯಕ್ರಮದಲ್ಲಿ ಸರಗಮಪ ಖ್ಯಾತಿಯ ಹಣಮಂತ ಲಮಾಣಿ, ಸೂರ್ಯಕಾಂತ, ಮೈಬೂಬಸಾಬ ಹಾಡಿನ ಮೂಲಕ ಜನರನ್ನ ರಂಜಿಸಿದರು. ಕಾರ್ಯಕ್ರಮದಲ್ಲಿ ಸುನೀಲ ಗುಡಗಂಟಿ, ಸಂಜು ಬಸಯ್ಯ, ಹಾಸ್ಯ ಚಟಾಕಿ ಸಿಡಿಸುವ ಮೂಲಕ ನೆರೆದಿದ್ದ ಜನರನ್ನ ನಗೆ ಗಡಲಲ್ಲಿ ತೆಲಿಸಿದರು. ಪಲ್ಲವಿ ಬಳ್ಳಾರಿ, ತಮ್ಮ ಅಮೋಗ ನೃತ್ಯದ ಮೂಲಕ ಗಮನ ಸೆಳೆದರು, ಜ್ಯೋತಿ ಗಂಗಾವತಿ ಹಾಗೂ ಮಾಲಾಶ್ರೀ ಗವನಳ್ಳಿ ಜಾನಪದ ಗೀತಿಯನ್ನ ಹಾಡುವುದರೊಂದಿಗೆ ನೃತ್ಯ ಮಾಡಿದರು, ಕಾರ್ಯಕ್ರಮದ ಕೊನೆ ಹಂತದಲ್ಲಿ ಬೊಂಬಾಟ ಬಸಣ್ಣ ಜಾನಪದ ಗೀತೆಯನ್ನ ಹಾಡಿ ರಂಜಿಸಿದರು, ನೆರೆದಿದ್ದ ಅಪಾ ಸಂಖ್ಯಯ ಜನರು ಸಿಳ್ಳಿ ಚಪ್ಪಾಳೆ ಹಾಕುವ ಮೂಲಕ ಕಲಾವಿದರನ್ನ ಪ್ರೋತ್ಸಾಹಿಸಿದರು,
ಕಾರ್ಯಕ್ರಮದ ಉದ್ಘಾಟನೆಯಲ್ಲಿ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬಸವ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬಸವ ಸನ್ಯದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.