ಬಸವೇಶ್ವರ ಜಯಂತಿ


ನವಲಗುಂದ,ಮೇ.11: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಎಲ್ಲ ಸಮಾಜದ ಮೆಚ್ಚುಗೆಗೆ ಸರ್ಕಾರ ಪಾತ್ರರಾಗಿದ್ದಾರೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಅವರು ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ವಿಶ್ವಗುರು ಬಸವಣ್ಣನವರ 891ನೇ ಜಯಂತಿ ಹಾಗೂ ಮಹಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ 602ನೇ ಜಯಂತಿಯ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಮಿಟಿಯ ಅದ್ಯಕ್ಷ ಗೋವಿಂದಪ್ಪ ನಡುವಿನಮನಿ, ಕೃಷ್ಣ ಶಾಲೆಯ ಅಧ್ಯಕ್ಷ ಪಾಂಡಪ್ಪ ಚವ್ವಣ್ಣವರ, ಆರ್.ಹೆಚ್. ಕೋನರಡ್ಡಿ, ಶಿವಣ್ಣ ಹುಬ್ಬಳ್ಳಿ, ಶೇಷಪ್ಪ ಚಾಕಲಬ್ಬಿ, ವಿ.ಡಿ. ಅಂದಾನಿಗೌಡ್ರ, ಡಿ.ಕೆ. ಹಳ್ಳದ, ಬಿ.ಹೆಚ್. ಪಾಟೀಲ, ಆನಂದ ಹವಳಕೋಡ, ವಿ.ಆರ್. ಕೋನರಡ್ಡಿ, ಶಾಂತವ್ವ ಚಿಕ್ಕನರಗುಂದ, ಸಂಜೀವ ರಾಯರೆಡ್ಡಿ, ಹೆಚ್.ಎನ್. ಲಿಂಗರಡ್ಡಿ, ಅಷ್ಫಾಕ ಚಾಹುಸೇನ್, ಸತೀಶ ಮಮಟಗೇರಿ, ಎನ್.ಬಿ. ಕಿರೆಸೂರ ಇತರರು ಉಪಸ್ತಿತರಿದ್ದರು.