ಬಸವೇಶ್ವರ ಚಿತ್ರಕ್ಕೆ ಅವಮಾನ; ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಿ

ಕಲಬುರಗಿ:ಅ.15: ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕರ್ಟಿಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ ಅವರು ಒತ್ತಾಯಿಸಿದರು.

              ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ರಾತ್ರಿ ವೇಳೆ ಸಿಗರೇಟನಿಂದ ವಿರೂಪಗೊಳಿಸಿರುವುದು ಖಂಡನಾರ್ಹ.ಈ ಕೃತ್ಯ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವ ಮೂಲಕ ತಪ್ಪಿತಸ್ತರಿಗೆ ಶಿಕ್ಷೆ ನೀಡಬೇಕು.ಮುಂದೆ ಇಂತಹ ಅನಾಹುತವಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.12 ನೇ ಶತಮಾನದಲ್ಲಿ ಜಾತಿ ಮತಗಳನ್ನು ದೂರ ಮಾಡಿ ಸಮಾನತೆ ತತ್ವಗಳನ್ನು ಭೋದಿಸಿ ಎಲ್ಲರನ್ನು ಒಂದೇ ಎಂದು ಸಾರಿದ ಸಾಮಾಜಿಕ ಕ್ರಾಂತಿಕಾರ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅವಮಾನ ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ.ಅಶಾಂತಿ ಉಂಟು ಸೃಷ್ಟಿಸುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.