ಬಸವೇಶ್ವರ ಕಾಲೇಜಿನಲ್ಲಿ ಬ್ಲಾಕ್‌ಫಂಗಸ್ ಗೆಯಶಸ್ವಿ ಶಸ್ತ್ರಚಿಕಿತ್ಸೆ

ಚಿತ್ರದುರ್ಗ, ಮೇ-30 ಕೋವಿಡ್ ಸೋಂಕಿತರು ಮತ್ತು ಗುಣಮುಖರಾಗುತ್ತಿರುವವರಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಮಾರಣಾಂತಿಕ ಬ್ಲಾಕ್‌ಫಂಗಸ್ ಕಾಯಿಲೆಗೆ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಹಾಗೂ ಸಮರ್ಪಕ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತಿದೆ ಎಂದು ಆಸ್ಪತೆಯ ಡೀನ್ ಡಾ. ಪ್ರಶಾಂತ್ ತಿಳಿಸಿದ್ದಾರೆ.ಬ್ಲಾಕ್‌ಪಂಗಸ್ ಕಾಯಿಲೆಯು ಸಾಮಾನ್ಯವಾಗಿ ರೋಗನಿರೋಧಕ ಶಕ್ತಿ ಕಮ್ಮಿ ಇರುವವರಲ್ಲಿ ಕಂಡುಬರುತ್ತದೆ. ಪ್ರಮುಖವಾಗಿ ಕೋವಿಡ್‌ನಿಂದ ಗುಣಮುಖರಾದ ಅಥವಾ ಕೋವಿಡ್ ರೋಗಿಗಳಲ್ಲಿ ಕಣ್ಣು ಮಬ್ಬಾಗಿ ಕಾಣುವುದು, ಬಾವು / ಊತ ಬರುವುದು ಮೂರ್ಛೆ ಹೋಗುವುದು ಮುಖದಲ್ಲಿ ತೀವ್ರ ವೇದನೆ ಅಥವಾ ಪಾರ್ಶ್ವವಾಯುವಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಈ ಕಾಯಿಲೆಯು ತುಂಬಾ ಅಪಾಯಕಾರಿಯಾಗಿದ್ದು, ಇದಕ್ಕೆ ಸರಿಯಾದ ಚಿಕಿತ್ಸೆ ಪಡೆದಲ್ಲಿ ಗುಣಮುಖರಾಗಲು ಸಾಧ್ಯವಿದೆ. ಕಪ್ಪು ಶೀಲಿಂಧ್ರ ರೋಗಿಗಳಿಗೆ ಬಸವೇಶ್ವರ ಆಸ್ಪತ್ರೆಯ ನರ ಶಸ್ತçಚಿಕಿತ್ಸೆ ತಜ್ಞ ಡಾ. ಕಿರಣ್‌ಕುಮಾರ್ ಸಿ.ಕೆ., ಡಾ. ಮಂಜುನಾಥ್, ಡಾ.ಆಕಾಶ್, ಅರವಳಿಕೆ ತಜ್ಞೆ ಡಾ. ಮೇಘ ಸೇರಿದಂತೆ ಸಮರ್ಥ ವೈದ್ಯರ ತಂಡವು ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಅನೇಕ ಯಶಸ್ವಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಿದ್ದು, ಈ ಭಾಗದ ಜನರಿಗೆ ಸಂಜೀವಿನಿಯಾಗಿ ಟೊಂಕಕಟ್ಟಿ ನಿಂತಿದೆ.ಬ್ಲಾಕ್‌ಫಂಗಸ್ ರೋಗಿಗಳ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರನ್ನು ಡಾ.ಶಿವಮೂರ್ತಿ ಮುರುಘಾ ಶರಣರು ಅಭಿನಂದಿಸಿದ್ದಾರೆ.