ಬಸವೇಶ್ವರ ಆಸ್ಪತ್ರೆ:ಪ್ಲಾಸ್ಟಿಕ್ ಸರ್ಜರಿ ಜಾಗೃತಿ ಉಪನ್ಯಾಸ

ಕಲಬುರಗಿ ಜು 15: ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆಯ ಅಂಗವಾಗಿ ಇಂದು ಬಸವೇಶ್ವರ ಭೋದನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಾಮಾನ್ಯ ಶಸ್ತ್ರ ಚಿಕಿತ್ಸೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗವು ಪ್ಲಾಸ್ಟಿಕ್ ಸರ್ಜರಿಯ
ಕುರಿತು ಜಾಗೃತಿ ಮೂಡಿಸುವ ಉಪನ್ಯಾಸ ಕಾರ್ಯಕ್ರಮವನ್ನು
ಬಸವೇಶ್ವರ ಆಸ್ಪತ್ರೆಯ ಆವರಣದಲ್ಲಿರುವ ಸಭಾಂಗಣದಲ್ಲಿ
ಹಮ್ಮಿಕೊಂಡಿತ್ತು.
ಹೈದ್ರಾಬಾದ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಎಸ್ .ಆರ್
ಹರವಾಳ್ ಅವರು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವದರ
ಮೂಲಕ ಉದ್ಘಾಟಿಸಿದರು. ಕಲ್ಯಾಣ ಕರ್ನಾಟಕದಲ್ಲಿ ಪ್ಲಾಸ್ಟಿಕ್ ಸರ್ಜರಿಯ
ಚಿಕಿತ್ಸೆ ಲಭಿಸುತ್ತಿರುವದು ಮತ್ತು ಇದರ ಅವಶ್ಯಕತೆ ಕುರಿತು
ಅವರು ಮಾತನಾಡಿದರು. ಮಹಾದೇವಪ್ಪಾ ರಾಂಪುರೆ ವೈದ್ಯಕೀಯ
ಮಹಾವಿದ್ಯಾಲಯದ ಡೀನ್ ರಾದ ಡಾ ಎಸ್ ಎಮ್ ಪಾಟೀಲ್ ಅವರು
ಕಾರ್ಯಕ್ರಮವನ್ನುದೇಶಿಸಿ ಮಾತನಾಡಿದರು. ಹೈ.ಕ.ಶಿಕ್ಷಣ
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ.ನಾಗೇಂದ್ರ
ಮಂಠಾಳೆ ,ಹೈಕಶಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ
ಸಾಮಾನ್ಯ ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥರಾದ ಡಾ ರಾಜಶೇಖರ
ಪಾಟೀಲ್ ಅವರು, ಮುಖ್ಯೋಪಾಧ್ಯಾಯರಾದ ಡಾ.ಶರಣಗೌಡ ಪಾಟೀಲ್, ಬಸವೇಶ್ವರ ಆಸ್ಪತ್ರೆಯ ಆಡಳಿತಾಧಿಕಾರಿಯಾದ ಡಾ.ಎಮ್
.ಆರ್.ಪೂಜಾರಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಸವೇಶ್ವರ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ.ಅಮರೇಶ
ಬಿರಾದಾರ ಅವರು ಪ್ಲಾಸ್ಟಿಕ್ ಸರ್ಜರಿ ಜೀವನಕ್ಕೆ ಎರಡನೇ ಅವಕಾಶ
ಎನ್ನುವ ವಿಷಯವನ್ನು ಕುರಿತು ಉಪನ್ಯಾಸ ಮಂಡಿಸಿದರು.
ಆಸ್ಪತ್ರೆಯ ಇನ್ನೋರ್ವ ಪ್ಲಾಸ್ಟಿಕ್ ಸರ್ಜನ್ ಡಾ.ಅನಿಲ ಕುಮಾರ
ಮಲ್ಹಾರಿ ಅವರು ಪ್ಲಾಸ್ಟಿಕ್ ಸರ್ಜರಿಯ ವಿಶಾಲತೆ ಎನ್ನುವ ವಿಷಯವನ್ನು
ಕುರಿತು ಉಪನ್ಯಾಸ ಮಂಡಿಸಿದರು.ಬಸವೇಶ್ವರ ಆಸ್ಪತ್ರೆಯ ಮತ್ತೊಬ್ಬ ಪ್ಲಾಸ್ಟಿಕ್ ಸರ್ಜನ್ ಡಾ.ಪವನ ಕುಮಾರ ಪಾಟೀಲ ಅವರು ಸುಟ್ಟಿರುವ ಕೈಗಳ
ವ್ಯವಸ್ಥಿತ ನಿರ್ವಹಣೆ ಎನ್ನುವ ವಿಷಯವನ್ನು ಕುರಿತು ಉಪನ್ಯಾಸ
ಮಂಡಿಸಿದರು.ಡಾ.ಅನಿಲ ಕುಮಾರ ಮಲ್ಹಾರಿ ಅವರು ಸ್ವಾಗತಿಸಿದರು,ವೈದ್ಯಕೀಯ ವಿದ್ಯಾರ್ಥಿ ವೀರೇಶ ಪ್ರಾರ್ಥನಾ ಗೀತೆಯನ್ನು ಹಾಡಿದರು.ಡಾ ಅಣ್ಣವೀರ ಅಲ್ಲದಅವರು ವಂದಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಡಾ.ಆಶಾ ಡಿಗ್ಗಿ ಅವರು ನಿರೂಪಣೆ ಮಾಡಿದರು.