ಬಸವೇಶ್ವರ್ ಮೂರ್ತಿ ಧ್ವಂಸ್ ಪ್ರಕರಣ ಕೀಡಿಗೇಡಿಗಳಿಗೆ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿ

ವಾಡಿ:ನ.10: ಬೆಳಗಾವಿ ಜಿಲ್ಲೆಯ ಬಿಜಗುಪ್ಪಿ ಗ್ರಾಮದಲ್ಲಿ ಮಹಾನ ಮಾನವತಾವಾದಿ, ವಿಶ್ವಗುರು ಬಸವಣ್ಣನವರು ಮೂರ್ತಿ ಧ್ವಂಸ್‍ಗೊಳಿಸಿರುವ ಕೀಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು, ವೀರಶೈವ-ಲಿಂಗಾಯತ ವೇದಿಕೆ ವತಿಯಿಂದ ಆಗ್ರಹಿಸಲಾಯಿತ್ತು.

ಚಿತ್ತಾಪೂರ ತಾಲ್ಲೂಕಿನ ರಾವೂರ ಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾವೂರ ಘಟಕ ಹಾಗೂ ವೀರಶೈವ-ಲಿಂಗಾಯತ ಯುವ ವೇದಿಕೆ ಚಿತ್ತಾಪೂರ ವತಿಯಿಂದ ಗ್ರಾಮದ ಶ್ರೀಸಿದ್ದಲಿಂಗೇಶ್ವರ್ ಸಂಸ್ಥಾನ ಮಠದಿಂದ, ಬಸವೇಶ್ವರ್ ಕ್ರಾಸ್‍ನವರೆಗೆ ಮೆರವಣಿಗೆ ಮಾಡಿ ಕೀಡಿಗೇಡಿಗಳ ಬಂಧನಕ್ಕಾಗಿ ಒತ್ತಾಯಿಸಲಾಯಿತ್ತು.

ಪ್ರತಿಭಟನೆ ಉದ್ದೇಶಿಸಿ ಮಾಜಿ ಶಾಸಕ ವಾಲ್ಮಿಕ ನಾಯಕ ಮಾತನಾಡಿ, ಜಗಜ್ಯೋತಿ ಬಸವಣ್ಣನವರು ಸರ್ವರಿಗೂ ನ್ಯಾಯ ನೀಡಿದ ಮಹಾನ ವ್ಯಕ್ತಿಯಾಗಿದ್ದು, 12ನೇ ಶತಮಾನದಲ್ಲಿಯೇ ಮಹಾತ್ಮಬಸವೇಶ್ವರ್ ಅನಿಸಿಕೊಂಡ ಅವರಿಗೆ ಇಂದು ದುಷ್ರ್ಕಮಿಗಳು ಮೂರ್ತಿ ವಿರೂಪಗೊಳಿಸಿರುವುದು ಸರಿಯಲ್ಲ. ಇಂತಹ ಕೀಡಿಗೇಡಿಗಳನ್ನು ಬಂಧಿಸಿ ಗಲ್ಲು ಶಿಕ್ಷಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.

ಮಾಜಿ ಜಿಪಂ ಸದಸ್ಯ ಗುಂಡಣ್ಣ ಬಾಳಿ, ದಲಿತ ಮುಖಂಡ ಬಸವರಾಜ ಬೆಣ್ಣೂರಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಚೆನ್ನಣ್ಣ ಬಾಳಿ, ಅಣ್ಣರಾವ ಬಾಳಿ, ಮಹೇಶ ಬಾಳಿ, ಸಿದ್ದಲಿಂಗ ಬಾಳಿ, ಶರಣು ಜ್ಯೋತಿ, ಜಗ್ಗು ಕೇರಳ್ಳಿ, ಶ್ರೀನಿವಾಸ ವಗ್ಗರ್, ಮಹಾದೇವ ಹಡಪಾದ, ಈರಣ್ಣ ಕಲ್ಯಾಣಿ, ಗುರು ಗುತ್ತೇದಾರ, ಜಗದೀಶ ಪೂಜಾರಿ, ಶಿವಶರಣಪ್ಪ ಕೊಳ್ಳಿ, ಶಾಂತು ಬಾಳಿ, ರಾಜು ಬಾಳಿ ಸೇರಿದಂತೆ ಅನೇಕರು ಇದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಬರೆದ ಮನವಿಪತ್ರವನ್ನು ಚಿತ್ತಾಪುರ ಗ್ರೇಡ್-2 ತಹಸೀಲ್ದಾರ್ ರವೀಂದ್ರದಾಮಾ ಅವರಿಗೆ ಸಲ್ಲಿಸಲಾಯಿತ್ತು. ಕಂದಾಯ ನೀರಿಕ್ಷಕ್ ದಶರಥ ಮಂತ್ತಟ್ಟಿ ಗ್ರಾಮಲೇಖಾಪಾಲಕ ಬಸವರಾಜ ಬಳ್ಳಾರಿ ಇದ್ದರು. ರಾಷ್ಟ್ರೀಯ ಹೆದ್ದಾರಿ 150ನ್ನು ತಡೆದು ಹೋರಾಟ ಮಾಡಿರುವುದರಿಂದ ಕೆಲ ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು.