ಬಸವೇಶ್ವರರ ಸಮಾನತೆ ಸಮಾಜ ಇಂದಿನ ತುರ್ತು ಅಗತ್ಯ: ಡಾ. ಅಜಯ್ ಸಿಂಗ್

ಜೇವರ್ಗಿ:ಎ.24:12 ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವವರು ಕಂಡಂತಹ ಸಮಾನತೆಯ ಸಮಾಜದ ಪರಿಕಲ್ಪನೆ ಇಂದಿನ ಅಅಗತ್ಯವಾಗಿದೆ. ಅವರು ಅಂದು ಸಮಾನತೆಯ ಕ3ಆಂತಿ ತರಲು ಮುಂದಾದರು. ಜಗತ್ತಿಗೇ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟೊಂತಹ ಮಹಾತ್ಮರು. ಅವರ ತತ್ವಗಳು ಇಂದಿಗೂ ಪ್ರಸ್ತುತ ಎಂದು ಜೇವರ್ಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಅಜಯ್ ಸಿಂಗ್ ಹೇಳಿದರು.

ಜೇವರ್ಗಿಯ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿಯ ಅಂಗವಾಗಿ ವಿಶ್ವಗುರು ಶ್ರೀ ಬಸವಣ್ಣನವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿನ ಅಂಕು ಡೊಂಕು ತಿದ್ದುವ ಯತ್ನ ಮಾಡಿದವರು. ಅಂತಹ ಮಹನೀಯರ ವಚನಗಳನ್ನು ಅಧ್ಯಯನ ಮಾಡಿ ಅವುಗಳನ್ನು ನಡೆ- ನುಡಿಯಲ್ಲಿ ಪಾಲಿಸಿದರೆ ಸಮಾನತೆಯ ಸಮಾಜ, ಸಾಮರಸ್ಯದ ಸಮಾಜ ನಮ್ಮದಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ರಾಜಶೇರ್ಖ ಸಿರಿ, ಗುರುಲಿಂಗಪ್ಪ ಗೌಡ ಆಂದೋಲ, ನೀಲಕಂಠ ಅವುಂಟಿ, ಶಿವು ಕಲ್ಲಾ, ಸಕ್ರೆಪ್ಪ ಗೌಡ ಹರನೂರ್ ರವಿ ಕೊಳಕೂರ್
,ಸಂಗನ ಗೌಡ ಗುಳ್ಯಾಳ್,ವಿಜಯ್ ಕುಮಾರ ಹಿರೇಮಠ್,ಚಂದ್ರಶೇಖರ ನೇರಡಗಿ,ನಾಗರಾಜ್ ಹಲಗೂರು ಸೇರಿದಂತೆ ಪ್ರಮುಖರು, ಉಪಸ್ಥಿತರಿದ್ದರು.