ಬಸವೇಶ್ವರರ ಪ್ರತಿಮೆಗೆ ಮೆಟ್ಟಿಲುಗಳ ಸೌಧದ ಉದ್ಘಾಟನೆ

ಕಲಬುರಗಿ:ಎ.6: ನಗರದ ಜಗತ್ ವೃತ್ತದಲ್ಲಿರುವ ಅಶ್ವಾರೋಹಿ ಶ್ರೀ ಬಸವೇಶ್ವರರ ಪ್ರತಿಮೆಗೆ ಮೆಟ್ಟಿಲುಗಳ ಸೌಧದ ಉದ್ಘಾಟನೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಖಂಡ್ರೆ ಅವರು ನೆರವೇರಿಸಿದರು.
ಸುಲಫಲ ಮಠದ ಪರಮಪೂಜ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಎಂ ವೈ ಪಾಟೀಲ, ವಿಧಾನ ಪರಿಷತ ಸದಸ್ಯ ಶಶೀಲ್ ನಮೋಶಿ, ಡಾ. ಶರಣ ಪ್ರಕಾಶ್‍ಪಾಟೀಲ, ಬಿ ಆರ್ ಪಾಟೀಲ್, ಅಲ್ಲಂಪ್ರಭು ಪಾಟೀಲ್, ದೊಡ್ಡಪ್ಪಗೌಡ ನರಿಬೋಳ್, ತಿಪ್ಪಣ್ಣಪ್ಪ ಕಮಕನೂರ, ಬಸವರಾಜ ಭೀಮಳ್ಳಿ ಅಧ್ಯಕ್ಷತೆಯನ್ನು ಶರಣಕುಮಾರ ಮೋದಿ ವಹಿಸಿದ್ದರು.
ಈ ಸಂದರ್ಭದಲ್ಲಿ ದಾನಿಗಳಾದ ಅಮರೇಶ ಪಾಟೀಲ ಪ್ರಧಾನ ಕಾರ್ಯದರ್ಶಿ ರಾಜ್ಯ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇವರನ್ನು ಸನ್ಮಾನಿಸಲಾಯಿತು. ರವೀಂದ್ರ ಶಾಬಾದಿ, ಆರ್ ಜಿ ಶೆಟಗಾರ, ಸಿದ್ದುಗೌಡ ಪಾಟೀಲ, ಈರಣ್ಣ ಗೋಳೆದ, ಚೆನ್ನಪ್ಪ ದಿಗ್ಗಾವಿ, ಶರಣು ಟೆಂಗಳಿ, ಡಾ ಶಂಭು ಪಾಟೀಲ ಬಳಬಟ್ಟಿ, ಸಂಗು ಮನ್ನಳ್ಳಿ, ಪ್ರವೀಣ ಪಾಟೀಲ, ಪ್ರದೀಪ ಪಾಟೀಲ, ಅಣವೀರ ಪಾಟೀಲ, ಪ್ರಫುಲ್ ನಮೋಶಿ, ಸೋಮಶೇಖರ ಹಿರೇಮo,À ವರದಾ ಶಂಕರ್, ಸಂಗಮೇಶ ಕಲ್ಯಾಣಿ, ಶಿವಾನಂದ ತೊರವಿ, ಶಿವರಾಜ್ ತಿಳಗೂ¼,À ಶರಣಗೌಡ ಪಾಟೀಲ್, ಜಯವರ್ಧನ ಅಂಬಲಗಿ ಇನ್ನಿತರರು ಉಪಸ್ಥಿತರಿದ್ದರು.