ಬಸವೇಶ್ವರರು ದೇಶಕ್ಕೆ ಸಮಾನತೆಯ ಸಂದೇಶವನ್ನು ನೀಡಿದ್ದಾರೆ:ಜಗದ್ಗುರು

ತಾಳಿಕೋಟೆ:ನ.12: ನಮ್ಮ ದೇಶದಲ್ಲಿಯ ದೀನ ದಲಿತ ಬಡವ, ನಿರ್ಗತಿಕ, ಶ್ರೀಮಂತ ಎಲ್ಲರಿಗೂ ಗೌರವವನ್ನು ತಂದುಕೊಡುವ ಮೂಲಕ ನಮ್ಮೇಲ್ಲರ ಕಣ್ಮುಂದೆ ಉಳಿದುಕೊಂಡಿದ್ದಾರೆಂದು ಎಂದು ಶ್ರೀಶೈಲ ಪೀಠದ ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಶುಕ್ರವಾರರಂದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಅಡಿಗಲ್ಲು ಸಮಾರಂಭವನ್ನು ನೇರವೇರಿಸಿ ಮಾತನಾಡುತ್ತಿದ್ದ ಅವರು ಅವರ ಮೂರ್ತಿಗಳನ್ನು ಸರ್ಕಲ್‍ಗಳಲ್ಲಿ ಚೌರಸ್‍ಗಳಲ್ಲಿ ನಿರ್ಮಿಸಲಾಗುತ್ತದೆ ಇದರ ಉದ್ದೇಶ ಅವರನ್ನು ನೋಡಿ ಸಮಾನತೆಯನ್ನು ಕಲಿಯಬೇಕು ಸಣ್ಣವರನ್ನು ಪ್ರೀತಿಸುವದನ್ನು ಅವರನ್ನು ಕೈ ಹಿಡಿದು ಮೇಲೆತ್ತುವಂತಹ ಗುಣಗಳು ಎಲ್ಲರಲ್ಲಿ ಬರಲಿ ಎಂಬ ಉದ್ದೇಶವಾಗಿದೆ ಮೂರ್ತಿಯ ಹಿಂದೆ ಇರುವ ವ್ಯಕ್ತಿ ಏನು ಇರುತ್ತಾರೆ ಆ ವ್ಯಕ್ತಿಯಲ್ಲಿರುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂಬ ಉದ್ದೇಶವಾಗಿದೆ ಅಂತಹ ಬಸವೇಶ್ವರರ ಪುಥ್ಥಳಿಯನ್ನು ಸ್ಥಾಪಿಸಲಿಕ್ಕೆ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು 75 ಲಕ್ಷ ರೂ. ಅನುದಾನದಲ್ಲಿ ಹಣ ನೀಡಿ ಧರ್ಮ ಕಾರ್ಯಕ್ಕೆ ಮುಂದಾಗಿರುವದು ಶ್ಲಾಘನಿಯ ಸ್ಮರಣೀಯವಾಗಿದೆ ಎಂದ ಅವರು ಸಮಾಜವನ್ನು ಕಟ್ಟಲಿಕ್ಕೆ ಸಂಘಟನೆಯನ್ನು ಮಾಡಲಿಕ್ಕೆ ಶಾಸಕ ನಡಹಳ್ಳಿ ಅವರು ಮೊದಲಿಗರಾಗಿದ್ದಾರೆ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ಈ ಭಾಗದಲ್ಲಿ ಸಿಗಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ವಹಿಸಿದ್ದರು.

ಈ ಸಮಯದಲ್ಲಿ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಗಚ್ಚಿನಮಠದ ಶ್ರೀ ಕಾಶಿನಾಥ ಮಹಾಸ್ವಾಮಿಗಳು, ಮುಖಂಡರುಗಳಾದ ಪ್ರಭುಗೌಡ ಮದರಕಲ್ಲ, ಜಿ.ಎಸ್.ಕಶೆಟ್ಟಿ, ಬಿ.ಎಸ್.ಗಬಸಾವಳಗಿ, ಅಶೋಕ ಸಜ್ಜನ, ರಾಮನಗೌಡ ಬಾಗೇವಾಡಿ, ಡಾ.ವ್ಹಿ.ಎಸ್.ಕಾರ್ಚಿ, ಡಾ.ಶ್ರೀಶೈಲ ಹುಕ್ಕೇರಿ, ಅಶೋಕ ಚಿನಗುಡಿ, ಎಂ.ಎಸ್.ಸರಶೆಟ್ಟಿ, ಕೆ.ಸಿ.ಸಜ್ಜನ, ಪ್ರಭು ಬಿಳೇಭಾವಿ, ದ್ಯಾಮನಗೌಡ ಪಾಟೀಲ, ಡಾ.ರವಿ ಅಗರವಾಲಾ, ಆರ್.ಎಲ್.ಕೊಪ್ಪದ, ಶಿವಶಂಕರ ಹಿರೇಮಠ, ಐ.ಬಿ.ಹಿರೇಮಠ, ಎಚ್.ಎಸ್.ಪಾಟೀಲ, ಎಸ್.ಎಂ.ಸಜ್ಜನ, ಪರಶುರಾಮ ತಂಗಡಗಿ, ಮಂಜೂರ ಬೇಪಾರಿ, ಜಿ.ಎಸ್.ಜಮ್ಮಲದಿನ್ನಿ, ಜಿ.ಎ.ಕಸ್ತೂರಿ, ಬಸವರಾಜ ಕುಂಭಾರ, ವಾಸುದೇವ ಹೆಬಸೂರ, ಜೈಸಿಂಗ್ ಮೂಲಿಮನಿ, ರಾಘು ವಿಜಾಪೂರ, ಪ್ರಕಾಶ ಹಜೇರಿ, ಶ್ರೀಕಾಂತ ಪತ್ತಾರ, ಮೊದಲಾದವರು ಇದ್ದರು.

ಜ್ಯೋತಿ ಗೆಜ್ಜಿ ಪ್ರಾರ್ಥಿಸಿದರು. ಮಹಾಂತೇಶ ಮುರಾಳ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು.


ಅಕ್ಕಮಹಾದೇವಿ ಸಮೂದಾಯ ಭವನಕ್ಕೆ ಭೂಮಿ

ತಾಳಿಕೋಟೆ, 25 ಲಕ್ಷ ರೂ. ಶಾಸಕರ ಅನುದಾನದಲ್ಲಿ ನಿರ್ಮಾಣವಾಗಲಿರುವ ಪಟ್ಟಣದ ಅಕ್ಕಮಹಾದೇವಿ ಸಮೂದಾಯ ಭವನ ನಿರ್ಮಾಣದ ಭೂಮಿ ಪೂಜೆಯನ್ನು ಶ್ರೀಶೈಲ ಪೀಠದ ಜಗದ್ಗುರು ಶ್ರೀಶ್ರೀಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶುಕ್ರವಾರರಂದು ನೆರವೇರಿಸಿದರು.

ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಮಯದಲ್ಲಿ ಅಕ್ಕನ ಬಳಗದ ಕವಿತಾ ಕತ್ತಿ, ಶಿವಲಿಂಗಮ್ಮ ಬಳಗಾನೂರ, ಸವಿತಾ ಕತ್ತಿ, ಪ್ರಭಾ ಕತ್ತಿ, ಗಿರಿಜಾ ಜಮ್ಮಲದಿನ್ನಿ, ಸುರೇಕಾ ಸಾಲಂಕಿ, ರೇಣುಕಾ ಕಾರ್ಜೋಳ, ಪುರಸಭಾ ಸದಸ್ಯ ಜೈಸಿಂಗ್ ಮೂಲಿಮನಿ, ವಾಸುದೇವ ಹೆಬಸೂರ, ಅಶೋಕ ಬಳಗಾನೂರ, ಎಂ.ಆರ್.ಕತ್ತಿ, ಸಿದ್ದು ವಾಲಿ, ಮುರುಗೇಪ್ಪ ಸರಶೆಟ್ಟಿ, ಕಾಶಿನಾಥ ಸಜ್ಜನ, ಮುರಿಗೆಪ್ಪ ಜಮ್ಮಲದಿನ್ನಿ, ಪ್ರಕಾಶ ನಿಡಗುಂದಿ, ಮೊದಲಾದವರು ಇದ್ದರು.