ಬಸವೇಶ್ವರರಿಗೆ ಬಸವರಾಜ್ ನಮನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.10: ನಗರದ ಹೆಚ್.ಆರ್.ಜಿ. ಸರ್ಕಲ್ ನಲ್ಲಿರುವ ವಿಶ್ವಗುರು ಬಸವಣ್ಣನವರಿಗೆ 891 ನೇ  ಬಸವ ಜಯಂತಿಯ ನಿಮಿತ್ತ ಕರ್ನಾಟಕ ಇತಿಹಾಸ ಅಕಾಡೆಮಿಯ ಪರವಾಗಿ ಜಿಲ್ಲಾಧ್ಯಕ್ಷ ಟಿ.ಹೆಚ್. ಎಂ. ಬಸವರಾಜ್ ಅವರು  ಮಾಲಾರ್ಪಣೆ ಮಾಡಿ ನಮನ‌ಸಲ್ಲಿಸಿದರು.
ಟಿ ಹೆಚ್ ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷರು,  ಕರ್ನಾಟಕ ಜಾನಪದ ಪರಿಷತ್ತಿನ ನಿಕಟ ಪೂರ್ವ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯ ಸಂಚಾಲಕರು,  ನಿವೃತ್ತ ಕೆಇಬಿ ಅಧಿಕಾರಿಗಳು, ಸಾಹಿತಿ, ಜಾನಪದ ಕಲಾವಿದ,  ಇತಿಹಾಸ ಸಂಶೋಧಕ ಟಿ ಹೆಚ್ ಎಂ ಬಸವರಾಜ್ ಅವರು ಇದೇ ವೇಳೆ ಬಸವಜ್ಯೋತಿ ಬೆಳಗಿದರು.
ಈ ಸಂದರ್ಭದಲ್ಲಿ ರೈತ ಮುಖಂಡ   ದರೂರು ಪುರುಷೋತ್ತಮಗೌಡ, ಜಿ ಏರಿಸ್ವಾಮಿ, ಚಾನಾಳ್ ಶೇಖರ್, ಚಾನಾಳ ಶಂಕರ್, ಬಸವ ದಳದ ರವಿಶಂಕರ್  ಮುಂತಾದವರು ಉಪಸ್ಥಿತರಿದ್ದರು