ಬಸವೇಶ್ವರನಗರದಲ್ಲಿ ಸಂಗ್ರಹಿಸಿಟ್ಟಿದ್ದ
ನೂರಾರು ಚೀಲ ಪಡಿತರ ಅಕ್ಕಿವಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.20: ತಾಲೂಕಿನ ಹಳ್ಳಿಗಳಲ್ಲಿ  ಹಂಚಿದ, ಹಂಚಬೇಕಾಗಿದ್ದ ಪಡಿತರ ಅಕ್ಕಿಯನ್ನು ಜನರಿಂದ ಮತ್ತು ಪಡಿತರ ಅಂಗಡಿಗಳಿಂದ ಸಂಗ್ರಹಿಸಿದ್ದ ನೂರಾರು ಚೀಲ ಅಕ್ಕಿಯನ್ನು ಇಂದು  ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ನಗರದ ಪಾಲಿಕೆ ಸದಸ್ಯರ ಬೆಂಬಲಿಗರಿಗೆ ಸೇರಿದ್ದಂತೆ. ಆದರೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಬೇರೊಬ್ಬರ ಹೆಸರಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.
ಕೆ.ಎ.34 ಬಿ 1161 ಬೊಲೆರೋ ಪಿಕಪ್ ವಾಹನದಲ್ಲಿ ಮೋಕಾ ಕಡೆಯಿಂದ ಅಕ್ರಮವಾಗಿ ಸಂಗ್ರಹಿಸಿಕೊಂಡ ಅಕ್ಕಿಯನ್ನು ತಂದು. ಬಸವೇಶ್ವರ ನಗರದಲ್ಲಿನ ಚಿಕ್ಕ ಶೆಡ್ ಒಂದರಲ್ಲಿ ಇಡಲು ಮುಂದಾಗಿದ್ದರು.
ಈ ಬಗ್ಗೆ ಅರಿತು ಕೆಲವರು ನೀಡಿದ ಮಾಹಿತಿ‌ ಮೇರೆಗೆ ನಿನ್ನೆ ರಾತ್ರಿ ಪೊಲೀಸರು  ಹೋಗಿ ಸೀಜ್ ಮಾಡಿದ್ದರು.
ಇದು ನಗರ ಪಾಲಿಕೆ ಸದಸ್ಯರ ಬೆಂಬಲಿಗರಿಗೆ ಸೇರಿದ್ದಾಗಿದ್ದರಿಂದ ಪೊಲೀಸರು ಕೇಸ್ ಮಾಡದಂತೆ ಒತ್ತಡ ತರುವ ಪ್ರಯತ್ನವೂ ನಡೆದಿತ್ತಿತ್ತಂತೆ.
ಆದಕ್ಕಾಗಿ ಈ ಮಾಹಿತಿ ತಿಳಿದ ಇಲಾಖೆಯವರೇ  ಮಾಧ್ಯಮದವರಿಗೆ ಹೇಳಿ ಸ್ಥಳಕ್ಕೆ ಬಂದು ಸುದ್ದಿ ಮಾಡಲು ಹೇಳಿದ್ದಲ್ಲದೆ ಕೇಸು ದಾಖಲು ಮಾಡುವಂತೆ ಮಾಡಿದ್ದಾರಂತೆ.
ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತಿತ್ತು.
ಬಲ್ಲ ಮಾಹಿತಿಗಳ ಪ್ರಕಾರ ಕಪ್ಪಗಲ್ಲು ರಸ್ತೆಯ ವ್ಯಕ್ತಿಗೆ ಸೇರಿದ್ದಂತೆ ಪೊಲೀಸರು ಯಾರ ಹೆಸರ ಮೇಲೆ ಪ್ರಕರಣ ದಾಖಲು ಮಾಡುತ್ತಾರೋ ಕಾದು ನೋಡಬೇಕಿದೆ.

Attachments area