ಬಸವಾದಿ ಶರಣರ ವಚನಗಳು ಎಲ್ಲರಿಗೂ ದಾರಿದೀಪ : ಮರುಳಸಿದ್ದ ಸ್ವಾಮೀಜಿ

ಅಥಣಿ ;ಸೆ.8:ಬಸವಾದಿ ಶಿವಶರಣರ ವಚನಗಳು ನಮಗೆಲ್ಲರಿಗೂ ದಾರಿದೀಪವಾಗಿವೆ. ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇದರಿಂದ ಪ್ರತಿಯೊಬ್ಬರ ಜೀವನ ಸಾರ್ಥಕತೆ ಪಡೆಯುತ್ತದೆ ಎಂದು ಅಥಣಿ ಶೆಟ್ಟರ ಮಠದ ಶ್ರೀ ಮರುಳಸಿದ್ದ ಸ್ವಾಮೀಜಿ ಹೇಳಿದರು
ಅವರು ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಗುರುವಾರ ಜರುಗಿದ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು ನಂದೇಶ್ವರ ಗ್ರಾಮ ಆಧ್ಯಾತ್ಮದ ಹಿನ್ನೆಲೆಯನ್ನು ಹೊಂದಿರುವ ಕ್ಷೇತ್ರವಾಗಿದೆ. ಪ್ರತಿ ವರ್ಷವೂ ಬಸವೇಶ್ವರ ಜಾತ್ರೆ ಅತಿ ಶೃದ್ಧಾ ಭಕ್ತಿಯಿಂದ ಪೂರ್ಣವಾಗಿ ಜರಗುತ್ತಿರುವುದು ಎಲ್ಲ ಭಕ್ತಾದಿಗಳಿಗೆ ಆನಂದವನ್ನುಂಟು ಮಾಡುತ್ತಿದೆ. ಜಾತ್ರೆಗಳು ಒಬ್ಬರನ್ನೊಬ್ಬರನ್ನು ಒಂದುಗೂಡಿಸುವ ಕೊಂಡಿಗಳಂತೆ ಕೆಲಸ ಮಾಡುತ್ತವೆ. ಪ್ರತಿಯೊಬ್ಬರೂ ಲಿಂಗಪೂಜೆ ಮಾಡಿಕೊಳ್ಳಬೇಕು ಲಿಂಗಪೂಜೆಯಿಂದ ಎಲ್ಲವೂ ದೊರೆಯುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ರಮೇಶಗೌಡ ಪಾಟೀಲ, ವಿರೂಪಾಕ್ಷ ಹಿರೇಮಠ, ಮಹೇಶ ಹಿರೇಮಠ, ಆರ್. ಆರ್ .ಪಾಟೀಲ, ಬಸಪ್ಪ ಚಂಡಕಿ, ಬಾಳಾಸಾಹೇಬ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷ ರಾಮಪ್ಪ ಪರಟಿ, ಅದೃಶ ಪಾಟೀಲ, ಶ್ರೀಶೈಲ ಹನಗಂಡಿ, ಹಣಮಂತ ಚಂಡಿಕಿ, ಮಹೇಶಗೌಡ ಪಾಟೀಲ, ಬಸನಿಂಗ ಪೂಜಾರಿ, ಆರ್. ಎಲ್. ಪಾಟೀಲ, ಸುಭಾಸ ಚಂಡಕಿ, ರಾಮಪ್ಪ ತೇಲಿ, ಸತ್ಯಪ್ಪ ಬಡವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಲ್ಲರಿಗೂ ಅನ್ನ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.