ಬಸವಾದಿ ಶರಣರ ವಚನಗಳಲ್ಲಿ ಸಕಲ ಸಮಸ್ಯೆಗೂ ಪರಿಹಾರ

ಹುಮನಾಬಾದ :ಆ.30: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಸಂಸ್ಥಾಪಕರಾದ ಲಿಂಗೈಕೆ ಪೂಜ್ಯ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮಿಗಳ ಜನ್ಮ ದಿನದ ಅಂಗವಾಗಿ ಕಸ್ತೂರ ಬಾ ಬಾಲಕಿಯರ ವಸತಿ ಶಾಲೆ ಜನತಾನಗರ ಹುಡಗಿಯಲ್ಲಿ ಹಮ್ಮಿಕೊಳ್ಳಲಾಯಿತು. ಕರ್ನಾಟಕ ಇತಿಹಾಸದಲ್ಲಿ 12 ನೇ ಶತಮಾನ ಬಹಳ ಮಹತ್ವದ ಸ್ಥಾನ ಮಾನವಿದೆ ಧರ್ಮ ತತ್ವಶಾಸ್ತ್ರ ಮತ್ತು ಸಾಹಿತ್ಯ ಕ್ರಾಂತಿಗೆ ಸಾಕ್ಷಿಯಾಗಿದೆ ಇದರಿಂದ ಸಾಮಾಜಿಕ ಪರಿವರ್ತನೆಗೆ ಕಾರಣವಾಯಿತೆಂದು ಹಿರಿಯ ಸಾಹಿತಿಯಾದ ಬಾಬುರಾವ ಪಾಟೀಲ ಚಿತ್ತಕೋಟಾ ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಂಗಮಕರ್ ಪ್ರಾಸ್ಥಾವಿಕ ಮತನಾಡುತ್ತ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಾಹಾಸ್ವಾಮಿಗಳ ಜನ್ಮ ದಿನ ಅಂಗವಾಗಿ ಶರಣ ಸಾಹಿತ್ಯ ಪರಿಷತ್ 29 ಅಗಸ್ಟ 1986 ರಂದು ಉದ್ಘಾಟನೆಯಾಯಿತು ಶರಣ ಸಾಹಿತ್ಯ ಕಲೆ ಸಂಸ್ಕಂತಿ ಜನಪದವನ್ನು ಸಂರಕ್ಷಿಸಲು ಹಾಗೂ ಪ್ರಾಸಾರ ಮಾಡಲು ವಿವಿಧ ಭಾಷೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುವುದು ಇದರ ಮುಖ್ಯ ಉದ್ದೇಶಯಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜಾತ ದಿಲಿಪಕುಮರ ಮುಖ್ಯಗುರುಗಳು ವಹಿಸಿದರು. ಸಾಹಿತಿಗಳಾದ ಈಶ್ವರ ತರೋಳ,ಆರೋಗ್ಯ ಹಿರಿಯ ನಿರಿಕ್ಷಣಾಧಿಕಾರಿಗಳು ದತ್ತಾತ್ರೇಯ, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ ಕಂಪಲಿ, ಲಲಿತಾ ರಮೆಶ, ಕವಿತಾ, ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದತ್ತಾತ್ರೇಯವರನ್ನು ಸನ್ಮಾನಿಸಲಾಯಿತು.