
ಕಲಬುರಗಿ:ಎ.11:12ನೇ ಶತಮಾನದ ಬಸವಾದಿ ಶರಣರ ಕಾಯಕ ಮತ್ತು ದಾಸೋಹ ತತ್ವಗಳನ್ನು ಪ್ರತಿಯೊಬ್ಬರು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದಾಗ ಸಮೃದ್ಧ ಹಾಗೂ ಸಾಮರಸ್ಯದ ಸಮಾಜವನ್ನು ನಿರ್ಮಾಣ ಮಾಡುವುದಕ್ಕೆ ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳು ಹಾಗೂ ಚಿಂತಕರಾದ
ಪೆÇ್ರ.ಯಶವಂತರಾಯ ಅಷ್ಠಗಿ ಅಭಿಪ್ರಾಯಪಟ್ಟರು.
ಕಲಬುರಗಿ ನಗರದ ಭವಾನಿ ನಗರ ರಿಂಗ್ ರೋಡ್ ಸಮೀಪದ ಶ್ರೀಗುರು ಚೆನ್ನವಿರೇಶ್ವರ ವಿರಕ್ತಮಠ (ಬಬಲಾದ ಮಠ) ದಲ್ಲಿ ಆಯೋಜಿಸಿದ್ದ 153 ನೇ ಶಿವಾನುಭವಗೋಷ್ಠಿಯ ಮಾಲಿಕೆಯಲ್ಲಿ ಕಾಯಕ ಮತ್ತು ದಾಸೋಹ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು.
ಕಾಯಕ ಹಾಗೂ ದಾಸೋಹ ಶರಣರು ನೀಡಿದ ಎರಡು ಅಮೂಲ್ಯ ತತ್ವಗಳು. ದುಡಿದು ಉಣ್ಣಬೇಕು ಎನ್ನುವುದು ಶರಣರ ನಿಯಮವಾಗಿತ್ತು. ದುಡಿಯದವರಿಗೆ ಊಟ ಮಾಡುವ ಹಕ್ಕಿಲ್ಲ ಎಂದು ಪ್ರತಿಪಾದಿಸಿ, ದುಡಿಮೆಗೆ ಕಾಯಕದ ಘನತೆ ತಂದುಕೊಟ್ಟರು ಎಂದು ಅವರು ಹೇಳಿದರು.
ಸತ್ಯ ಶುದ್ಧ ಕಾಯಕದಿಂದ ಬಂದ ಹಣವನ್ನು ಸಮಾಜಕ್ಕೆ, ಬಡವರಿಗೆ, ದೀನ ದುರ್ಬಲರಿಗೆ, ಅಶಕ್ತರಿಗೆ ದಾಸೋಹ ಮಾಡಿ, ತಾನು ಬಳಸಬೇಕು ಎಂಬ ಸಂದೇಶ ಸಾರಿದ್ದ ಬಸವಾದಿ ಶರಣರ ವಾಣಿ ಸಾರ್ವಕಾಲಿಕ ಶ್ರೇಷ್ಠ ಎಂದು ಪೆÇ್ರ.ಅಷ್ಠಗಿ ನುಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಬಲಾದ ಮಠದ ಪರಮಪೂಜ್ಯ ಶ್ರೀ ಗುರುಪಾದಲಿಂಗ ಮಹಾ ಸ್ವಾಮಿಗಳು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಗದೀಶ್ ಪಾಟೀಲ್ ಬಾಗೋಡಿ ಆಗಮಿಸಿದ್ದರು,
ಸಿದ್ದಣ್ಣ ಬಿರಾದಾರ್, ಮಾಣಿಕ್ ರಾವ್, ಸೋಮನಾಥ್ ಮಂಗಾಣೆ, ಶರಣಗೌಡ ಪಾಟೀಲ್, ಶಿವಶಂಕರ್ ಬಿರಾದಾರ್ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಂಗಮನಾಥ ಹೂಗಾರ್ ನಡೆಸಿಕೊಟ್ಟರು. ಶಿವಶರಣಪ್ಪ ಪಾಟೀಲ್ ಸ್ವಾಗತಿಸಿದರು. ಕವಿತಾ ಶೇಖರ್ ದೇಗಾಂವ್ ವಂದನಾರ್ಪಣೆ ಗೈದರು.
ಅಪಾರ ಸಂಖ್ಯೆಯಲ್ಲಿ ಬಬಲಾದ ಮಠದ ಭಕ್ತ ವೃಂದದವರು ಪಾಲ್ಗೊಂಡಿದ್ದರು.