ಬಸವಲಿಂಗ ಸ್ವಾಮಿಗೆ ಪಿ.ಎಚ್.ಡಿ. ಪದವಿ

ಬೀದರ್:ಮೇ.17: ಇಲ್ಲಿಯ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಸವಲಿಂಗ ಸ್ವಾಮಿ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿ ನೀಡಿದೆ.
ಸ್ವಾಮಿ ಅವರು ಡಾ. ಸಿ.ಎಂ. ತವಾಡೆ ಹಾಗೂ ಡಾ. ಕಿಶನ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ‘ಸಮ್ ಸ್ಟಡೀಸ್ ಆನ್ ಡಿಸೈನ್ ಆ್ಯಂಡ್ ಡೆವೆಲೆಪ್‍ಮೆಂಟ್ ಆಫ್ ಮೈಕ್ರೊ ಸ್ಟ್ರಿಪ್ ಅಂಟೆನ್ನಾಸ್ ಫಾರ್ ಕಮ್ಯುನಿಕೇಷನ್ ಅಪ್ಲಿಕೆಷನ್’ ಕುರಿತು ಮಂಡಿಸಿದ ಪ್ರೌಢ ಪ್ರಬಂಧವನ್ನು ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿಗೆ ಮಾನ್ಯ ಮಾಡಿದೆ.
ಬಸವಲಿಂಗ ಸ್ವಾಮಿ ಅವರಿಗೆ ಪಿ.ಎಚ್.ಡಿ. ಪದವಿ ದೊರೆತಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.