ಬಸವಲಿಂಗ ಶಿವಾಚಾರ್ಯರ 73ನೇ ಸಂಸ್ಮರಣೋತ್ಸವ ನಾಳೆ

ಭಾಲ್ಕಿ:ಫೆ.5: ತಾಲೂಕಿನ ಖಟಕಚಿಂಚೋಳಿ ಗ್ರಾಮದ ಹುಗ್ಗೆಳ್ಳಿ ಹಿರೇಮಠದಲ್ಲಿ ಸದ್ಗುರು ಶ್ರೀ ಬಸವಲಿಂಗ ಶಿವಾಚಾರ್ಯರ 73ನೇ ಸಂಸ್ಮರಣೋತ್ಸವ ಫೆ.6 ರಂದು ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ವಿಜ್ರಂಭಣೆಯಿಂದ ನಡೆಯಲಾಗುವುದು ಎಂದು ಹುಗ್ಗೆಳ್ಳಿ ಹಿರೇಮಠ ಖಟಕಚಿಂಚೋಳಿಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಖಟಕಚಿಂಚೋಳಿಯ ಇತಿಹಾಸ ಪ್ರಸಿದ್ಧ ಹುಗ್ಗೆಳ್ಳಿ ಹಿರೇಮಠದ ಮಹಾ ತಪಸ್ವಿ, ಸದ್ಗುರು ಷ.ಬ್ರ.ಶ್ರೀ ಬಸವಲಿಂಗ ಶಿವಾಚಾರ್ಯರ 73ನೇ ಸಂಸ್ಮಣರೋತ್ಸವ ಕಾರ್ಯಕ್ರಮ ಇದೇ ಫೆ.6 ರಂದು ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಮಾತೋಶ್ರೀ ಮಹಾನಂದ ತಾಯಿಯ ನೇತೃತ್ವದಲ್ಲಿ ನಡೆಯಲಿದೆ. ಪ್ರಾರಂಭದಲ್ಲಿ ಕತೃ ಗದ್ದುಗೆಗೆ ಮಹಾಪೂಜೆ, ಮಹಾರುದ್ರಾಭಿಷೇಕ ನಡೆಯಲಿದೆ. ನಂತರ ಬೆಳಿಗ್ಗೆ 10 ಗಂಟೆಗೆ ನಡೆಯುವ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ಪಾಳಾ ಕಟ್ಟಿಮನಿ ಸಂಸ್ಥಾನದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಹಿರೇನಾಗಾವ ಶಾಂತಲಿಂಗೇಶ್ವರ ಮಠದ ಶ್ರೀ ಜಯಶಾಂತಲಿಂಗ ಮಹಾಸ್ವಾಮಿಗಳು, ಹಲಬರ್ಗಾ ಹಿರೇಮಠ ಸಂಸ್ಥಾನದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಬಸವಕಲ್ಯಾಣ ಗವಿಮಠ ತ್ರಿಪುರಾಂತದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಚಾಂಬೋಳ ಹಿರೇಮಠ ಸಂಸ್ಥಾನದ ರುದ್ರಮುನಿ ದೇವರು ವಹಿಸುವರು. ಹುಗ್ಗೆಳ್ಳಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಹುಗ್ಗೆಳ್ಳಿ ಹಿರೇಮಠದ ಶ್ರೀ ರುದ್ರಮುನಿ ದೇವರು ಸಮ್ಮುಖ ವಹಿಸುವರು. ಕಾರ್ಯಕ್ರಮದಲ್ಲಿ ವೀರ ಮಹಾಂತೇಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು, ರೇವಣಸಿದ್ದ ಜಾಡರ, ರಮೇಶ ಅಲಶೆಟ್ಟಿ, ರಾಗಿಣಿ ವಿವೇಕಾನಂದ ಮಠಪತಿ, ಲಕ್ಷ್ಮೀ ನಾಗಯ್ಯಾ ಸ್ವಾಮಿ, ಬಸವರಾಜ ಐನಾಪೂರೆ, ಸಂಗಮೇಶ ಬೇಲೂರೆ, ಓಂಕಾರ ಬಿರಾದಾರ, ರಮೇಶ ಹೊನ್ನಾಳೆ, ಅನೀಲಕುಮಾರ ಪಟ್ನೆ, ಗುಂಡುಸ್ವಾಮಿ ಜಾಂತೆ, ವಿವೇಕಾನಂದ ಉಂಬರಗೆ, ವಿಜಯಕುಮಾರ ಕಂಟೆ, ಧನರಾಜ ಬಿರಾದಾರ ಸೇರಿಂದತೆ ವಿವಿಧ ರಾಜಕೀಯ ಮುಖಂಡರು ಉಪಸ್ಥಿತರಿರುವರು, ಭಕ್ತಾದಿಗಳು ಹೆಚ್ಚಿನ ಸಂಖೆಯಲ್ಲಿ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕು ಎಂದು ತಿಳಿಸಿದ್ದಾರೆ.