ಬಸವಲಿಂಗಯ್ಯ ಸ್ವಾಮಿಗೆ ಡಾಕ್ಟರೇಟ

ಕಲಬುರಗಿ:ಜೂ.19:ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಪಿ.ಎಚ್‍ಡಿ ಗಾಗಿ ಸಂಶೋಧನಾ ಮಾಡುತ್ತಿದ್ದ ಶ್ರೀ ಬಸವಲಿಂಗಯ್ಯ ಸ್ವಾಮಿ ಇವರಿಗೆ ಗುಲಬರ್ಗಾ ವಿಶ್ವವಿದ್ಯಾಲಯವು “ಡಾಕ್ಟರೇಟ್” ಪದವಿ ನೀಡಿದೆ.
ಇವರು ಮಂಡಿಸಿದ Impact of National Rural Health Mission on Women’s Health in Rural Areas – A sociological study of Raichur District” ವಿಷಯದ ಮಹಾ ಪ್ರಭಂದಕ್ಕೆ ಡಾ|| ಜೈಕಿಶನ ಠಾಕೂರ ಪ್ರಾಂಶುಪಾಲರು ಎಸ.ಸ್ಸಿ ಎಸ.ಟಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಂಡೇಪಲ್ಲಿ(ಕೆ) ತಾ|| ಸೇಡಂ ಕಲಬುರಗಿ ಜಿಲ್ಲೆ ಇವರು ಮಾರ್ಗದರ್ಶಕರಾಗಿರುತ್ತಾರೆ. ಪ್ರಸ್ತುತ ಶ್ರೀ ಬಸವಲಿಂಗಯ್ಯ ಸ್ವಾಮಿ ಇವರು ಸರ್ಕಾರಿ ಪದವಿ ಪೂರ್ವ ಕಾಲೇಜು ಜವಳಗೇರಾ ತಾ|| ಸಿಂಧನೂರಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.