ಬಸವರಾಜ ಹೊಸಳ್ಳಿ ಜನಸ್ನೇಹಿ ಲೆಕ್ಕಾಧಿಕಾರಿ: ಸಿದ್ದಲಿಂಗ ದೇವರು

ವಾಡಿ:ಎ.4: ಮನೆಯ ಮುಖ್ಯಸ್ಥ ಸರಿಯಾಗಿ ಲೆಕ್ಕ ಹಾಕಿಕೊಂಡರೇ, ಮನೆ ಆರ್ಥಿಕ ಪ್ರಗತಿಯತ್ತ ಸಾಗುತ್ತದೆ. ಗ್ರಾಮಲೆಕ್ಕಾಧಿಕಾರಿ ಪ್ರಾಮಾಣಿಕವಾಗಿದ್ದರೇ ಸರ್ಕಾರ ಯೋಜನೆ ಗ್ರಾಮದಲ್ಲಿ ಸದ್ಬಳಕೆ ಆಗುತ್ತದೆ ಎಂದು ಶ್ರೀಸಿದ್ದಲಿಂಗೇಶ್ವರ ಮಠದ ಉತ್ತರಾಧಿಕಾರಿ ಪೂಜ್ಯ ಸಿದ್ದಲಿಂಗ ದೇವರು ಹೇಳಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದ ಶ್ರೀಸಿದ್ದಲಿಂಗೇಶ್ವರ ಸಂಸ್ಥೆಯ ವತಿಯಿಂದ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಹೊಸಳ್ಳಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸ್ವಾಗತ, ಬೀಳ್ಕೋಡುಗೆ ಸೃಷ್ಠಿಯ ನಿಯಮವಾಗಿದ್ದು, ಅಧಿಕಾರಿ ಶಾಶ್ವತವಲ್ಲ. ಆದರೆ, ಅಧಿಕಾರ ಸಿಕ್ಕಸಮಯದಲ್ಲಿ ಜನರ ಕಷ್ಟಕ್ಕೆ ಪ್ರಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಿದರೇ ಮಾತ್ರ ಜನಸ್ನೇಹಿ ಆಗಿರಲು ಸಾಧ್ಯವಾಗಿದ್ದು, ರಾವೂರ ಗ್ರಾಮಲೆಕ್ಕಾಧಿಕಾರಿ ಬಸವರಾಜ ಹೊಸಳ್ಳಿ ಪ್ರಮಾಣಿಕ ಸೇವೆ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಸನ್ಮಾನ ಸ್ವೀಕರಿಸಿ ಗ್ರಾಮಲೆಕ್ಕಾಧಿಕಾರಿ ಬಸವರಾಜ ಹೊಸಳ್ಳಿ ಮಾತನಾಡಿ, 2ವರ್ಷದ ಅವಧಿಯಲ್ಲಿ ರಾವೂರ, ಗಾಂಧಿನಗರ ಜನರ ಸಂಪೂರ್ಣ ಸಹಕಾರದಿಂದ ಅಚ್ಚುಕಟ್ಟಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಅರ್ಹ ಫಲಾನುಭವಿಗಳಿಗೆ ಮಾಶಾಸನ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದು, ಮನಸ್ಸಿಗೆ ತೃಪ್ತಿದಾಯಕವಾಗಿದೆ. ಕಂದಾಯ ಇಲಾಖೆಯಡಿ ಇರುವ 43 ಯೋಜನೆಗಳ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸುವಂತೆ ಮಾಡಿದ್ದೆನೆ. ಇನ್ನು ಹಲವಾರು ಯೋಜನೆಗಳ ಮಾಹಿತಿ ಪಡೆದುಕೊಂಡು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಜನರಿಗೆ ಸಲಹೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಗುಂಡಣ್ಣ ಬಾಳಿ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಪ್ರಾಂಶುಪಾಲ ಕಾಂತಪ್ಪ ಬಡಿಗೇರ್, ಸಿದ್ದಾರೂಡ, ರಘುನಾಥ ಕರದಾಳ, ಮಾಳಿಂಗರಾಯ ಪೂಜಾರಿ, ಗ್ರಾಮದ ಮುಖಂಡರಾದ ಅಣ್ಣರಾವ ಬಾಳಿ, ಮಹೇಶ ಬಾಳಿ, ಮಲ್ಲಿಕಾರ್ಜುನ ತೂಮಕೂರ, ಈರಣ್ಣ ಫರತಾಬಾದ, ಪರಶುರಾಮ ತುನ್ನೂರ್, ಯುನುಸ್ ಪ್ಯಾರೆ, ಭೀಮಣ್ಣ ಜಡಿ, ಅಣ್ಣರಾವ ಸೇಡಂ, ನಾಗೇಶ ಸಜ್ಜನ್, ಈರಣ್ಣ ರಾಜೋಳಿ, ಭೀಮು ಪೂಜಾರಿ, ಹಣಮು ಮಹಾರಾಜ, ಭೀಮಯ್ಯಾ, ರಾಜು ಮೇಳಕುಂದಿ, ಹಣಮಂತ ಚವ್ಹಾಣ, ತಿಮ್ಮಯ್ಯಾ ಪವಾರ, ಭೀಮು ಕೆಸಬಳ್ಳಿ, ದತ್ತು ಗುತ್ತೆದಾರ, ಬಸವರಾಜ ಕರದಳ್ಳಿ, ಈಶಪ್ಪ ಇಂಗಳಗಿ, ಯಮನಪ್ಪ ಪೂಜಾರಿ ಉಮೇಶ ಪರೀಟ್, ಇದ್ದರು. ಶಿಕ್ಷಕ ಈರಣ್ಣ ಹಳ್ಳಿ ಸ್ವಾಗತಿಸಿದರು. ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ರಾವೂರ, ಗಾಂಧಿನಗರ ಗ್ರಾಮಸ್ಥರಿಂದ ಹೊಸಳ್ಳಿಯವರಿಗೆ ಸನ್ಮಾನ ಮಾಡಲಾಯಿತ್ತು.