ಬಸವರಾಜ ರಾಯರೆಡ್ಡಿ ಗೆಲುವಿಗೆ ಅನ್ನಸಂತರ್ಪಣೆ


ಸಂಜೆವಾಣಿ ವಾರ್ತೆ 
ಕುಕನೂರು, ಮೇ.18: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಬಸವರಾಜ ರಾಯರೆಡ್ಡಿ ಅವರ ಗೆಲುವಿಗೆ ಸಂಭ್ರಮಿಸಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಚುನಾವಣಾ ಮುಂಚಿತವಾಗಿ ದೇವಸ್ಥಾನದ ಗರ್ಭಗುಡಿಯಲ್ಲಿ ಉಳಿಗಾಯನ್ನು ಇರಿಸಲಾಗಿತ್ತು. ಶ್ರೀದೇವಿಗೆ ಗೆಲುವಿಗೆ ಆರ್ಕೆ ಹೊತ್ತಿದ್ದ ಯುವ ಕಾರ್ಯಕರ್ತರು ಚುನಾವಣೆಯಲ್ಲಿ ಗೆದ್ದ ನಂತರ ಸಾರ್ವಜನಿಕರಿಗೆ ದೇವಸ್ಥಾನದ ಆವರಣದಲ್ಲಿ ಅನ್ನ ಸಂತಪ೯ಣೆ ಜರುಗಿತು. ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಚಂಡೂರು, ಮುತ್ತು ವಾಲ್ಮೀಕಿ, ಭರ್ಮಪ್ಪ ತಳವಾರ್, ಗಗನ ನೋಟಗಾರ್, ಬರಮಪ್ಪ ನೋಟ್ಗಾರ್ ಮೊದಲಾದವರು ನೇತೃತ್ವ ವಹಿಸಿದ್ದರು.