ಬಸವರಾಜ ಮಲಕಾರಿಗೆ ಗೌರವ ಡಾಕ್ಟರೇಟ್’

ಧಾರವಾಡ, ಆ 21: ಸಾಮಾಜಿಕ ಹೋರಾಟಗಾರರು, ಶೋಷಿತ ವರ್ಗಗಳ ಪರ ಧ್ವನಿಯಾದ ಹಿಂದುಳಿದ ವರ್ಗಗಳ ನಾಯಕರಾದ ಬಸವರಾಜ ಎಸ್. ಮಲಕಾರಿ ಅವರ ಸಾಮಾಜಿಕ ಹೋರಾಟ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಗೋವಾದ ಪಣಜಿಯಲ್ಲಿಇಂಟರ್ ನ್ಯಾಷನಲ್ ಹ್ಯೂಮನ್ ಡೆವಲಪ್ಮೆಂಟ್ ಯೂನಿವರ್ಸಿಟಿ’ ವತಿಯಿಂದ “ಗೌರವ ಡಾಕ್ಟರೇಟ್” ಪದವಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.