ಕಲಬುರಗಿ, ಜೂ.2: ರಾಯಚೂರು ಜಿಲ್ಲಾ ಕಾರಾಗೃಹ ಜೈಲರ್ ಬಸವರಾಜ ಜಿ. ಪಾಟೀಲ್ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಕಾರಾಗೃಹ ಅಧೀಕ್ಷಕರು ಹಾಗೂ ಸಿಬ್ಬಂದಿ ವರ್ಗದ ವತಿಯಿಂದ ಬಸವರಾಜ ಪಾಟೀಲ್ ದಂಪತಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು.
ರಾಯಚೂರು ಜಿಲ್ಲಾ ಕಾರಾಗೃಹ ಕ್ವಾಟರ್ಸ್ ನಲ್ಲಿ ಆಯೋಜಿಸಿದ ವಯೋನಿವೃತ್ತಿ ಕಾರ್ಯಕ್ರಮದಲ್ಲಿ ಬಸವರಾಜ ಪಾಟೀಲ್ ದಂಪತಿಗೆ ನೆನಪಿನ ಕಾಣಿಕೆ ನೀಡಿ, ಸನ್ಮಾನಿಸಿ ಶುಭಕೋರಿದರು.
ಇದೆ ವೇಳೆ ಕಾರಾಗೃಹ ಅಧೀಕ್ಷಕ ಬಿ. ಆರ್. ಅಂದಾನಿ ಅವರು ಮಾತನಾಡಿ, ಬಸವರಾಜ ಪಾಟೀಲ್ ಅವರು ತಮ್ಮ ಜೀವನದಲ್ಲಿ ತಾಳ್ಮೆ, ಸಮಯ ಪಾಲನೆ ಅಳವಡಿಸಿಕೊಂಡು ಇಲಾಖೆಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಕಾರ್ಯ ವೈಖರಿ ನಮ್ಮಗೆಲ್ಲರಿಗೂ ಮಾದರಿ ಎಂದು ಹೇಳಿದರು.
ಬಸವರಾಜ ಪಾಟೀಲ ಅವರು ಕಾರಾಗೃಹ ಇಲಾಖೆಯಲ್ಲಿ ಸುದೀರ್ಘ 38 ವರ್ಷಗಳ ಕಾಲ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಲ್ಲಿನ ಒಳ್ಳೆಯ ಗುಣಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಹ ಸಿಬ್ಬಂದಿಗಳಿಗೆ ಸಲಹೆ ನೀಡಿದರು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ
ಬಸವರಾಜ ಪಾಟೀಲ ಅವರು, ಇಲಾಖೆಯಲ್ಲಿ ಸುದೀರ್ಘ 38 ವರ್ಷಗಳ ಕಾಲ ಯಶಸ್ವಿಯಾಗಿ, ಆತ್ಮ ತೃಪ್ತಿಯಿಂದ ಸೇವೆ ಸಲ್ಲಿಸಿದ್ದೇನೆ. ಸೇವೆಯಲ್ಲಿ ಸಹಕರಿಸಿದ ಇಲಾಖೆ ಎಲ್ಲ ಅಧಿಕಾರಿಗಳು ಹಾಗೂ ಸಹ ಸಿಬ್ಬಂದಿಗಳಿಗೆ ಧನ್ಯವಾದಗಳು ತಿಳಿಸಿದರು.
ಜೈಲರ್ ಭಾಗ್ಯಶ್ರೀ, ಸಹಾಯಕ ಜೈಲರ್ ಶಾಮ್ ಶಿವಪ್ಪ ಬಿದರಿ ಹಾಗೂ ರಾಜಕುಮಾರ್ ಅವರು ಮಾತನಾಡಿ, ಬಸವರಾಜ ಪಾಟೀಲ್ ಅವರು ಸರಳ, ಸಜ್ಜನ ಹಾಗೂ ಶಾಂತ ಸ್ವಭಾವದವರು.
ಕರ್ತವ್ಯದಲ್ಲಿ ನಮ್ಮಗೆ ಹಲವು ರೀತಿಯಲ್ಲಿ ಸಲಹೆ ಸೂಚನೆ ನೀಡುತ್ತಿದರು. ಅವರು ತಾಳ್ಮೆ, ಸಮಯ ಪಾಲನೆ ಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದು, ನಮ್ಮಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೈಲರ್ ಪುಂಡಲೀಕ್ ಟಿ ಕೆ., ಮುಖ್ಯ ವೀಕ್ಷಕ ಮಲ್ಲಿಕಾರ್ಜುನ, ಗುರುರಾಜ್ ಕಾಮಾ, ರಮೇಶ್ ಎಲ್, ಯಲಗೋಡ, ಭೀಮಾಶಂಕರ್, ಲಲಿತಬಾಯಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಯಶ್ರೀ ಆರ್ ಅವರು ಪ್ರಾರ್ಥನೆ ಗೀತೆ ಹಾಡಿದರು. ಮಾಶಾಕ್ ನಿರೂಪಿಸಿದರು.