ಬಸವರಾಜ ಪಂಚಾಳ ನೇಮಕಕ್ಕೆ ಮನವಿ

ಕಲಬುರಗಿ ನ 14: ಸುಮಾರು ದಶಕಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿರುವ ಬಸವರಾಜ ಪಂಚಾಳ ಅವರನ್ನು ರಾಜ್ಯ ವಿಶ್ವಕರ್ಮ ನಿಗಮದ ಅಧ್ಯಕ್ಷರಾಗಿ ನೇಮಿಸುವಂತೆ ವಿಶ್ವಕರ್ಮ ಸಮಾಜದ ಮುಖಂಡರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಮನವಿಯನ್ನು ಸಲ್ಲಿಸಿದರು.
ಬಸವರಾಜ ಪಂಚಾಳರು ಎಲ್ಲ ಚುನಾವಣೆಗಳಲ್ಲಿ ಒಬ್ಬ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ,ಶಹಬಾದ ಹಾಗೂ ಚಿತ್ತಾಪುರದ ಮತಕ್ಷೇತ್ರದ ಪಕ್ಷದ ಬೆಳವಣಿಗೆಗೆ ಪೂರಕವಾಗಿ ಸಕ್ರಿಯರಾಗಿದ್ದು, ಪಕ್ಷದ ಎಲ್ಲಾ ಸ್ತರದ ಜವಾಬ್ದಾರಿಯನ್ನು ನಿರ್ವಹಿಸಿ, ಪಕ್ಷದ ಭದ್ರ ನೆಲೆಗೆ ಸದಾ ಶ್ರಮ ವಹಿಸುತ್ತಿರುವರು. ರಾಜ್ಯದ ವಿಶ್ವಕರ್ಮ ಸಮಾಜದಲ್ಲಿ ಹಾಗೂ ಎಲ್ಲಾ ಜನ ಸಮೂಹದಲ್ಲಿ ಯುವಸಮೂಹದ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಅವರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿಸಿ ಯುವ ಸಮೂಹದ ಖುಷಿಯನ್ನು ಇಮ್ಮಡಿ ಗೊಳಿಸ ಬೇಕು ಎಂದು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಲಬುರಗಿ ಏಕದಂಡಿ ಮಠದ ಪೂಜ್ಯ ಸುರೇಂದ್ರ ಮಹಾಸ್ವಾಮಿಗಳು ವಿಧಾನಪರಿಷತ್ ಸದಸ್ಯರಾದ ಬಿ ಜಿ ಪಾಟೀಲ್ ಹಾಗೂ ಕಲ್ಯಾಣ ಕರ್ನಾಟಕದ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ,ಜಿಲ್ಲಾಧ್ಯಕ್ಷಶಿವರಾಜ ಪಾಟೀಲ ರದ್ದೆವಾಡಗಿ, ಲೋಕಸಭಾ ಸದಸ್ಯ ಉಮೇಶ್ ಜಾದವ,ಖ್ಯಾತ ಉದ್ದಿಮೆದಾರ ರಘುನಾಥ್ ಮೈಲಾಪುರ,ಉಪ್ಪಣ್ಣ ಪೂತ್ದ್ತಾರ್,ವಿಠಲ ರಾವ ಸುತಾರ,ಅರವಿಂದ್ ಪೂತ್ದ್ದಾರ್ ,ಅಮೃತ ಹಳ್ಳಿ ಸೇರಿದಂತೆ ತಾಲೂಕ, ಜಿಲ್ಲಾ ಮುಖಂಡರು ಹಾಗೂ ಮಠಾಧೀಶರು ಉಪಸ್ಥಿತರಿದ್ದರು