
ವಿಜಯಪುರ: ಮಾ.12:ಸೈಕಲ್ ಮೇಲೆ ಸುಮಾರು 4 ಸಾವಿರ ಕಿ.ಮೀ ಪ್ರಯಾಣ ನಡೆಸಿ, ನಗರಕ್ಕೆ ಆಗಮಿಸುತ್ತಿರುವ ನಗರ ನಿವಾಸಿ ಬಸವರಾಜ ಶಾಂತಪ್ಪ ದೇವರ ಅವರ ಕಾರ್ಯ ಶ್ಲಾಘನೀಯ ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಳಿ ವಯಸ್ಸಿನಲ್ಲಿ (68) 57 ದಿನಗಳ ಕಾಲ ಸೈಕಲ್ ಮೇಲೆ ಸಂಚರಿಸಿ, ನರ್ಮದಾ ಪ್ರರಿಕ್ರಮ, ಮಣ್ಣು ಉಳಿಸಿ, ನೀರು ಉಳಿಸಿ, ಪರಿಸರ ಸಂರಕ್ಷಣೆ ಹಾಗೂ ಅಂಗಾಂಗ ದಾನಗಳ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸುವ ಮಹತ್ತರ ಕಾರ್ಯ ಕೈಗೊಂಡಿದ್ದಾರೆ.
ಓಂಕಾರೇಶ್ವರದಿಂದ ಸೈಕಲ್ ಯಾತ್ರೆ ಆರಂಭಿಸಿ, ಮಹಾರಾಷ್ಟ್ರ, ಗುಜರಾತ ಹಾಗೂ ಮಧ್ಯಪ್ರದೇಶದಲ್ಲಿ ಸುದೀರ್ಘ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮಾ.14 ರಂದು ಆಗಮಿಸುತ್ತಿರುವ ಬಸವರಾಜ ದೇವರ ಅವರಿಗೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.