ಬಸವರಾಜ ಕೊನೇಕಗೆ ಸಾಹಿತಿಗಳಿಂದ ಸನ್ಮಾನ

ಕಲಬುರಗಿ,ನ.13-ನೂರಾರು ಪುಸ್ತಕಗಳನ್ನು ಪ್ರಕಟಿಸುತ್ತಾ ಅವುಗಳನ್ನು ಓದುಗರಿಗೆ ತಲುಪಿಸುತ್ತ ಸದ್ದಿಲ್ಲದೆ, ಜ್ಞಾನದಾಹಿಗಳ, ವಿದ್ಯಾರ್ಥಿಗಳ ಸೇವೆ ಸಲ್ಲಿಸುತ್ತಿರುವ ಬಸವರಾಜ ಕೊನೇಕ್ ಅವರಿಗೆ ವಿಸ್ತಾರ ಪ್ರೈವೇಟ್ ಲಿಮಿಟೆಡನ ವಿಸ್ತಾರ ನ್ಯೂಸ್ ಬಳಗವು 2022 ನೇ ಸಾಲಿನ ರಾಜ್ಯಮಟ್ಟದ “ಕಾಯಕಯೋಗಿ” ಪ್ರಶಸ್ತಿ ನೀಡಿ ಗೌರವಿಸಿದ ಪ್ರಯುಕ್ತ ಕಲಬುರಗಿಯ ಸಾಹಿತಿಗಳು ಹಾಗೂ ಅವರ ಆತ್ಮೀಯ ಬಳಗದವರು ಕೊನೇಕ್ ಅವರನ್ನು ಸನ್ಮಾನಿಸಿದರು.
ಮೂಲತ: ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದವರಾದ ಬಸವರಾಜ ಕೊನೆಕ್ ಅವರು ಸಿದ್ದಲಿಂಗೇಶ್ವರ ಬುಕ್ ಡಿಪೆÇೀ ಮತ್ತು ಪ್ರಕಾಶನವನ್ನು ಪ್ರಾರಂಭಿಸುವುದರ ಮೂಲಕ 3,000 ಕ್ಕಿಂತ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಪುಸ್ತಕ ಉದ್ಯಮದ ಜೊತೆಗೆ, ಸಾಮಾಜಿಕ ಕಾರ್ಯದಲ್ಲೂ ಮುಂದಿದ್ದಾರೆ. ಸಾಹಿತ್ಯ ಪರಿಚಾರಕರು ಆಗಿರುವ ಇವರು ಸಾಹಿತ್ಯದ ವಿವಿಧ ಕೃತಿಗಳನ್ನು ಪ್ರಕಟಿಸಿದ್ದಾರೆ. ಸಿದ್ದಲಿಂಗೇಶ್ವರ ಪ್ರಕಾಶನ, ಬಸವ ಪ್ರಕಾಶನ ಎಂಬ ಅಂಗ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಇವರ ಸಾಧನೆಯನ್ನು ಮನಗಂಡು ವಿಸ್ತಾರ ಪ್ರೈವೇಟ್ ಲಿಮಿಟೆಡನ ವಿಸ್ತಾರ ನ್ಯೂಸ್ ವತಿಯಿಂದ “ಕಾಯಕ ಯೋಗಿ “ಪ್ರಶಸ್ತಿ ನೀಡಿ ಗೌರವಿಸಿದ್ದು. ಕಲ್ಬುರ್ಗಿ ಜಿಲ್ಲೆಯ ಸಾಹಿತಿಗಳು ಬರಹಗಾರರು ಮತ್ತು ನಾಗರಿಕರು ಹೆಮ್ಮೆಪಡುವ ವಿಷಯವಾಗಿದೆ ಎಂದು ಸಿದ್ದಲಿಂಗೇಶ್ವರ ಪ್ರಕಾಶನದ ಪುಸ್ತಕ ಪರಿಶೀಲನ ಸಮಿತಿಯ ಸದಸ್ಯರಾದ ಪೆÇ್ರ.ಶಿವರಾಜ ಪಾಟೀಲ್ ಅವರು ಸನ್ಮಾನಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪರಿಶೀಲನ ಸಮಿತಿಯ ಸದಸ್ಯರಾದ ಡಾ. ಶ್ರೀಶೈಲ್ ನಾಗರಾಳ್,ಡಾ. ಚಿ.ಸಿ ನಿಂಗಣ್ಣ, ಡಾ. ಶರಣಬಸಪ್ಪ ವಡ್ಡನಕೇರಿ, ಸೇರಿದಂತೆ ಸಾಹಿತಿಗಳಾದ ಸುಬ್ರಾವ ಕುಲಕರ್ಣಿ, ಪ. ಮನು ಸಗರ, ಬಿ.ಎಚ್ ನೀರಗುಡಿ, ಶಿವಾನಂದ ಕಶೆಟ್ಟಿ, ಅಂಬಾರಾಯ ಕೋಣೆ, ಮೊದಲಾದರೂ ಉಪಸ್ಥಿತರಿದ್ದರು.