ಬಸವರಾಜ ಕಣ್ಣಿಯವರ ಕಾರ್ಯ ಶ್ಲಾಘನೀಯ: ಶಾಸಕ ಯಶವಂತಗೌಡ ಪಾಟೀಲ್

ಇಂಡಿ, ಜೂ.3-ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜದ ಒಂದು ವರ್ಗ ಕೊರೊನಾದಿಂದ ಬಳಲುತ್ತಿದ್ದರೆ ಮತ್ತೊಂದು ವರ್ಗ ಹಸಿವಿನಿಂದ ಬಳಲುತ್ತಿದೆ. ಕಠಿಣ ಕಫ್ರ್ಯೂವಿನಿಂದ ಅಹಾರವಿಲ್ಲದೆ ಬಳುಲುತ್ತಿದ್ದ ಬಡವರಿಗೆ ಬಸವರಾಜ ಕಣ್ಣಿ ಗುರುಗಳು ಅಹಾರ ಕಿಟ್ ಒದಗಿಸುವ ಮೂಲಕ ಸಾರ್ಥಕ ಕೆಲಸವನ್ನು ಮಾಡಿದ್ದಾರೆ ಎಂದು ಶಾಸಕ ಯಶವಂತಗೌಡ ಪಾಟೀಲ್ ಹೇಳಿದರು.
ಅವರು ಪಟ್ಟಣದ ಶ್ರೀ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆ ಮತ್ತು ಶ್ರೀ ಸಿದ್ಧಲಿಂಗೇಶ್ವರ ಲ್ಯಾಂಡ್ ಡೆವೆಲಪರ್ಸ ವತಿಯಿಂದ ಸಂಸ್ಥೆಯ ಆವರಣದಲ್ಲಿ ಪುರಸಭೆಯ ಡ ವರ್ಗದ ನೌಕರರು, ಬಡವರಿಗೆ, ನಿರ್ಗತಿಕರಿಗೆ 15 ಕೆಜಿ ಕಿಟ್ ಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ತಡವಲಗಾ ಗ್ರಾ.ಪಂ ಮಾಜಿ ಅಧ್ಯಕ್ಷ ತಮ್ಮಣ್ಣ ಪೂಜಾರಿ ಮಾತನಾಡಿ ಬಡವರಿಗೆ, ನಿರ್ಗತಿಕರಿಗೆ, ವಾರಿಯರ್ಸ ಕಷ್ಟಕ್ಕೆ ಮಿಡಿದ ನಾಯಕ ಬಸವರಾಜ ಕಣ್ಣಿ ಸಹಕಾರ, ಕಷ್ಟದಲ್ಲಿರುವವರಿಗೆ ಸಹಾಯ ನೀಡುವದು ಮಾನವಧರ್ಮ ಎಂದು ತಿಳಿದು ಕೊರೊನಾ ದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಕೈಯಿಂದ ಆದಷ್ಟು ಅಹಾರ ಕಿಟ್ ಗಳನ್ನು ವಿತರಿಸುವ ಮೂಲಕ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದರು.
ವೇದಿಕೆಯ ಮೇಲೆ ಪ್ರಥಮ ದರ್ಜೆ ಗುತ್ತಿಗೆದಾರ ರಮೇಶ ಗುತ್ತೆದಾರ, ಸಂಸ್ಥೆಯ ಕಾರ್ಯದರ್ಶಿ ಶಿವಕುಮಾರ ಕಣ್ಣಿ, ಉಪಾಧ್ಯಕ್ಷ ಶಶಿಕುಮಾರ ಕಣ್ಣಿ ,ಮಳಗು ಬೆನೂರ, ಸೋಮಶೇಖರ ಬ್ಯಾಳಿ, ಯಲಗೊಂಡ ಪೂಜಾರಿ, ತಾಲೂಕಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಇಲಿಯಾಸ ಬೊರಾಮಣಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಅವಿನಾಶ ಬಗಲಿ ಮತ್ತಿತರಿದ್ದರು.