ಬಸವರಾಜ್ ಹುಟ್ಟು ಹಬ್ಬ: ಆಹಾರ ಧಾನ್ಯ ಕಿಟ್ ವಿತರಣೆ

ರಾಯಚೂರು, ಜೂ.೨.- ಸಿ ಬಸವರಾಜ್ ವಕೀಲರು ಇವರ ಹುಟ್ಟು ಹಬ್ಬದ ಅಂಗವಾಗಿ
ಬಸವರಾಜ್ ವಕೀಲರ ಅಭಿಮಾನಿಗಳ ಬಳಗ ಮತ್ತು ಜೈ ಭಾರತಾಂಬೆ ಯುವಕ ಮಂಡಳಿ ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡ ಕುಟುಂಬಗಳಿಗೆ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಂದ್ರಕಲಾ ಎಸ್ ಬಾಬು, ಅಜಯ್, ಸುರೇಶ್ ಕುಮಾರ್, ಗಣೇಶ್, ಎನ್ ಗಣೇಶ್, ದಾನಪ್ಪ, ಚಿನ್ನು, ಬಂಡೇಶ, ಮಹೇಂದ್ರ,ಹನುಮಂತ, ಹುಲಿಗೆಪ್ಪ, ತಾಯಪ್ಪ, ಪವನ್,ಪಾಂಡು,ಸೇರಿದಂತೆ ಯುವಕರು ಭಾಗವಹಿಸಿದ್ದರು.