ಬಸವರಾಜ್ ಬೊಮ್ಮಾಯಿಯವರು ಅದೃಷ್ಟದ ಮುಖ್ಯಮಂತ್ರಿ

????????????????????????????????????


ಚಿತ್ರದುರ್ಗ. ಅ.೧೯; ಜಗತ್ತಿನಲ್ಲಿ ಮೂರು ವರ್ಗದ ಜನರಿದ್ದಾರೆ. ಆಯುಷ್ಯಕ್ಕಾಗಿ ಆಯುಷ್ಯವನ್ನು ಅಳೆದು ಹಾಕುವವರು, ಇವರು ಅಸಹಾಯಕರಾಗಿರುತ್ತಾರೆ, ಇವರು ಸಾಧನೆಯನ್ನು ಮಾಡಲು ಸಮಾಜ ಬಿಡುತ್ತಿಲ್ಲ. ಬದುಕಿಗೆ ಆಯುಷ್ಯವನ್ನು ಅಳೆದು ಹಾಕುವವರು, ಮತ್ತು ಸಾಧನೆಗೆ ಆಯುಷ್ಯವನ್ನು ಅಳೆದು ಹಾಕುವವರು. ಇದು ಸವಾಲಿನಿಂದ ಕೂಡಿದೆ ಎಂದು ಡಾ.ಶಿವಮೂರ್ತಿ ಮುರುಘಾಶರಣರು ನುಡಿದರು.ಶ್ರೀಮಠದ ಅನುಭವ ಮಂಟಪದಲ್ಲಿ  ಪೀಠಾರೋಹಣ ತೃತೀಯ ದಶಮಾನೋತ್ಸವದ ಅಂಗವಾಗಿ ನಡೆದ ಗುರುವಂದನೆ ಕಾರ್ಯಕ್ರಮ ದಿವ್ಯಸಾನಿದ್ಯ ವಹಿಸಿ ಮಾತನಾಡಿದ ಅವರು ಶರಣರು ಮೂರನೇಯ ವರ್ಗದವರಾಗಿದ್ದಾರೆ. ದಾರ್ಶನಿಕರು ಸಂತರು ಆಯುಷ್ಯ ಕಡಿಮೆ ಆದರೆ ಸಾಧನೆ ಜಾಸ್ತಿ. ವಿವೇಕನಂದರು ಇದಕ್ಕೆ ಉತ್ತಮ ಉದಾಹರಣೆ. ಬಸವಣ್ಣನವರು ವಚನಗಳ ಮೂಲಕ ವಿವರಣೆ ನೀಡಿದರು. ನಮ್ಮ ವಿದ್ಯಾಸಂಸ್ಥೆಯ ನೌಕರರು ಸೇರಿ ಕ್ಯಾಪಿಟೇಬಲ್ ಪುಸ್ತಕವನ್ನು ರಚಿಸಿದ್ದಾರೆ. ಮುಖ್ಯಮಂತ್ರಿಗಳು ಹತ್ತು ಕೆರೆಗಳಿಗೆ ನೀರನ್ನು ತುಂಬಿಸುವ ಕಾರ‍್ಯವನ್ನು ಮಾಡಿದ್ದಾರೆ. ಇದಕ್ಕೆ ಒಂದು ಟಿ.ಎಂ.ಸಿ ನೀರನ್ನು ಬಿಡುಗಡೆ ಮಾಡಿ ಎಂದು ಕೇಳಿದರು. ಬರದ ನಾಡಾದ ದುರ್ಗದಲ್ಲಿ ಒಂದು ಕಾರಿಡಾರ್ ಸಹ ಇಲ್ಲ, ಇದರಿಂದ ನನಗೆ ತುಂಬ ನೋವುಂಟಾಗಿದೆ. ಇದನ್ನು ಸಹಿಸಿಲು ಸಾಧ್ಯವಿಲ್ಲ. ಮುಂದಿನ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ದಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕೆಂದರು. ಬಸವರಾಜ್ ಬೊಮ್ಮಾಯಿಯವರು ಅದೃಷ್ಟದ ಮುಖ್ಯಮಂತ್ರಿ ಮತ್ತು ಬಿ.ಎಸ್.ಯಡ್ಯೂರಪ್ಪನವರು ಅನುಭವದ ಮುಖ್ಯಮಂತ್ರಿಗಳಾಗಿದ್ದಾರೆ. ಇಬ್ಬರೂ ಸಹ ದುರ್ಗದ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.ಕಾರ್ಯಕ್ರಮ-ಸಮ್ಮುಖವನ್ನು ಚಿತ್ರದುರ್ಗ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ವಹಿಸಿ ಮಾತನಾಡಿ, ಎಲ್ಲ ಶೋಷಿತ ಸಮುದಾಯಗಳಿಗೆ ಶ್ರೀಗಳು ಸಮಾನತೆಯನ್ನು ನೀಡಿದ್ದಾರೆ. ದೀಕ್ಷೆ ಪಡೆದ ಪ್ರತಿಯೊಬ್ಬರಿಗೂ 5 ಎಕರೆ ಭೂಮಿಯನ್ನು ನೀಡಿ ಮಠಗಳನ್ನು ಸ್ಥಾಪಿಸಿಕೊಂಡು ಅಭಿವೃದ್ದಿಯ ಕಡೆ ಹೋಗುವಂತೆ ಮಾಡಿದವರು ಶ್ರೀಗಳು. ಮಾಜಿ ಮುಖ್ಯಮಂತ್ರಿ ಬಿ.ಎಸ್,ಯಡ್ಯೂರಪ್ಪನವರ ಸಹಕಾರವು ಇಲ್ಲಿ ಪ್ರಮುಖ. ಬಸವರಾಜ್ ಬೊಮ್ಮಾಯಿರವರು ಸಹ ಶೋಷಿತ ಸಮುದಾಯಗಳ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಬಸವಣ್ಣನವರ ಇಚ್ಛೆಯ ಸಮಸಮಾನತೆಯ ದಿನಾಚರಣೆಯನ್ನು ಜಾರಿಗೆ ತರಬೇಕೆಂಬ ಇಂಗಿತವನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ ಎಂದು ತಿಳಿಸಿದರು. ಬಸವ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳಾದ  ಬಸವರಾಜ ಬೊಮ್ಮಾಯಿ, ಬಸವ ಶರಣರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗುರು ವಂದನೆ ಮಾಡಿದರು. ಇದು ಕರಾರು ರಹಿತ ಪ್ರೀತಿ ಭಕ್ತಿಯನ್ನು ಸಮರ್ಪಣಾ ಭಾವದಿಂದ ಮಾಡಬೇಕು. ವೈಚಾರಿಕ ಕ್ರಾಂತಿಯೇ ಶರಣ ಸಂಸ್ಕೃತಿ, ಮನುಷ್ಯರನ್ನು ಮನುಷ್ಯರಾಗಿ ನೋಡುವುದೇ ಶರಣ ಸಂಸ್ಕೃತಿ. 12ನೇ ಶತಮಾನದ ಪ್ರತಿಪಾದನೆಯನ್ನು ಶ್ರೀಗಳು ಮಾಡುತ್ತಿದ್ದಾರೆ. ಈಗ 21ನೇ ಶತಮಾನ, ಅಂಕಿಗಳು ತಿರುಗುಮುರುಗಾಗಿವೆ. ಮನುಕುಲದ ಅಭಿವೃದ್ದಿಯಾಗಬೇಕು. ಬಸವಣ್ಣ ಇಂದಿಗೂ ಪ್ರಸ್ತುತ. ಅಸಮಾನತೆ, ಲಿಂಗಬೇದ ಇಂದಿಗೂ ಇದೆ. ಸಂಪೂರ್ಣವಾಗಿ ಇದನ್ನು ತೊಲಗಿಸುವ ಜವಾಬ್ದಾರಿ ಶರಣರಿಂದ ಪ್ರಾರಂಭವಾಗಿದೆ. ಇದನ್ನು ಎಲ್ಲರು ಮುಂದುವರಿಸಿಕೊAಡು ಹೋಗುವುದು ಜನಸಾಮಾನ್ಯರ ಕರ್ತವ್ಯವಾಗಬೇಕು. ಮೌಢ್ಯಗಳು ತಮಗೆ ದುಃಖ ಉಂಟು ಮಾಡಿವೆ.. ಸಾಮಾಜಿಕ ಸಮಾನತೆ ಸಂತೋಷವನ್ನು ಉಂಟು ಮಾಡಿದೆ. ಯಡ್ಯೂರಪ್ಪನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಹೋರಾಟದ ಮನೋಭಾವ ಹೊಂದಿದ್ದರು. ಅಧಿಕಾರಕ್ಕೆ ಬಂದಾಗ ಅವುಗಳನ್ನು ಕರ‍್ಯರೂಪಕ್ಕೆ ತಂದರು. ಭದ್ರಾ ಮೇಲ್ದಂಡೆ ಯೋಜನೆಯನ್ನು ಆರಂಭಿಸಿ ಬರದ ನಾಡಾದ ಚಿತ್ರದುರ್ಗಕ್ಕೆ ನೀರಾವರಿ ಸೌಲಭ್ಯವನ್ನು ಹರಿಸಲು ನೆರವಾಗಿದ್ದಾರೆ. ಇದೊಂದು ಜನಪರ ಕೆಲಸ.ಶ್ರೀಗಳು ಹೇಳಿದ ಬೇಡಿಕೆಗಳನ್ನು ಮಾಡಲು ಅಧಿಕಾರಿಗಳೊಂದಿಗೆ ಮಾತನಾಡಿ ಇಂಡಸ್ಟಿçÃಯಲ್ ಟೌನ್ ಶಿಪ್ ಮಾಡಲು ಸಿದ್ದನಿದ್ದೇನೆ ಎಂದರು.ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಶರಣ ಸಂಸ್ಕೃತಿ ಉತ್ಸವ-2021ರ ಕಾರ್ಯಾಧ್ಯಕ್ಷರಾದ  ಕೆ.ಎಸ್.ನವೀನ್ ಸ್ವಾಗತಿಸಿ, ಉಪನ್ಯಾಸಕರಾದ ರಹಮ್ಮತ್ ಉನ್ನಿಸಾ ನಿರೂಪಿಸಿ ವಂದಿಸಿದರು ಖ್ಯಾತ ಬಾಲಿವುಡ್ ಹಿನ್ನಲೆ ಗಾಯಕ  ಹರಿಹರನ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.