ಬಸವರಾಜ್‍ರಿಗೆ ಜ್ಞಾನ ದಾಸೋಹ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ:ಏ.01: ಶ್ರೀ ಶರಣಬಸವೇಶ್ವರ್ ಸಂಸ್ಥಾನದಿಂದ ಪ್ರದಾನ ಮಾಡುವ ‘ಜ್ಞಾನ ದಾಸೋಹ ರತ್ನ ಪ್ರಶಸ್ತಿ’ಯನ್ನು ನಿವೃತ್ತ ಎಸ್.ಪಿ. ಬಸವರಾಜ್ ಅವರಿಗೆ ಅವರ ನಿವಾಸದಲ್ಲಿ ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ್ ಮತ್ತು ಶ್ರೀಶೈಲ ಸಾರಂಗ ಮಠದ ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಬುಧವಾರ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಚವದಾಪುರಿ ಹೀರೆಮಠದ ರಾಜಶೇಖರ್ ಶಿವಾಚಾರ್ಯರು, ಮಕ್ತಂಪುರದ ಗುರುಬಸವ ಮಠದ ಶಿವಾನಂದ್ ಸ್ವಾಮೀಜಿ, ಡಾ. ಸಿದ್ದೇಶ್ ಡಾ. ನೀಲಾಂಬಿಕಾ ಶೇರಿಕಾರ್ ಮುಂತಾದವರು ಉಪಸ್ಥಿತರಿದ್ದರು.