ಬಸವರಾಜೇಶ್ವರಿಯವರ 16ನೇ ಸಂಸ್ಮರಣೆಉಚಿತ ಸ್ವಯಂ ಪ್ರೇರಿತ ರಕ್ತದಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.20: ದಾನ ಮಾಡುವ ಪ್ರತಿಯೊಂದು ಹನಿ ರಕ್ತವು ಜೀವವನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿದೆ  ಎಂದು ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎನ್.ನಾಗಭೂಷಣ ಅಭಿಪ್ರಾಯಪಟ್ಟಿದ್ದಾರೆ.
ಅವರು ನಿನ್ನೆ ಬಿಐಟಿಎಂ ಕಾಲೇಜಿನಲ್ಲಿ ಮಾಜಿ ಕೇಂದ್ರ ಸಚಿವೆ ಬಸವರಾಜೇಶ್ವರಿಯವರ 16ನೇ ಸಂಸ್ಮರಣೆಯ ಅಂಗವಾಗಿ ಏರ್ಪಡಿಸಿದ್ದ.  ಉಚಿತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ  ಮಾತನಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ ಬಗ್ಗೆ ತಿಳಿಸಿ, ರಕ್ತದಾನಕ್ಕೆ  ವಿದ್ಯಾರ್ಥಿಗಳಿಗೆ  ತಿಳಿಸಿದರು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ, ಕಿಷ್ಕಿಂದ ವಿಶ್ವವಿದ್ಯಾಲಯ,  ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್  ಮ್ಯಾನೇಜ್‌ಮೆಂಟ್,  ಬಳ್ಳಾರಿ ಬಿಸಿನೆಸ್ ಕಾಲೇಜ್, ವಿಮ್ಸ್,  ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ, ಇವರ ಸಂಯುಕ್ತಾಶ್ರಯದಲ್ಲಿ ಈ   ರಕ್ತದಾನ” ಶಿಬಿರ ಏರ್ಪಡಿಸಲಾಗಿತ್ತು.
ಈ ವೇಳೆ ಬಸವರಾಜೇಶ್ವರಿಯವರ ಜೀವನದ ಕುರಿತ ‘ಅನುಭವ ಮಂಟಪ’ ತೆಲುಗು ಪುಸ್ತಕ ಬಿಡುಗಡೆ ಮಾಡಲಾಯಿತು. ಡಾ. ಈರಣ್ಣ ಕೃತಿ ಕುರಿತು ಮಾಹಿತಿಯನ್ನು ನೀಡಿದರು.
ಡಾ. ಎಸ್.ಜೆ.ವಿ. ಮಹಿಪಾಲ್, ಉಪಾಧ್ಯಕ್ಷರು, ಭಾ.ರೆ,ಕ್ರಾ.ಸಂ, ಬಳ್ಳಾರಿ ಮತ್ತು ಅಧ್ಯಕ್ಷರು, ಟಿಇಹೆಚ್‌ಆರ್‌ಡಿ ಟ್ರಸ್ಟ್ ಮತ್ತು ಬಿಪಿಎಸ್‌ಸಿ ಇವರು.  ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ರಕ್ತದಾನದ  ನಿಮ್ಮ ಕೊಡುಗೆ, ಎಷ್ಟೇ ಚಿಕ್ಕದಾಗಿದ್ದರೂ, ಅಸಂಖ್ಯಾತ ವ್ಯಕ್ತಿಗಳ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಬದಲಾವಣೆಯ ಏರಿಳಿತದ ಪರಿಣಾಮವನ್ನು ಉಂಟುಮಾಡಬಹುದೆಂದು ಹೇಳಿ,  ವಿವಿಧ ದೇಶಗಳ ರೆಡ್ ಕ್ರಾಸ್ ಸಂಸ್ಥೆಯ ಹುಟ್ಟು ಹಾಗೂ ಬೆಳವಣಿಗೆಯ ಬಗ್ಗೆ ವಿವರಣೆ ಮತ್ತು ಧೇಯೋದ್ಯೇಶಗಳನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಎ. ಪಾಟೀಲ್, ಕುಲಸಚಿವರು, ಕಿಷ್ಕಿಂದ ವಿಶ್ವವಿದ್ಯಾಲಯ ಇವರು.  ನಾವು ಪ್ರತಿ ಬಾರಿ ರಕ್ತದಾನ ಮಾಡುವಾಗ, ಮೂರು ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿರುತ್ತೇವೆ. ಆ ಮೂರು ವ್ಯಕ್ತಿಗಳು ತಮ್ಮ ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯಲು, ಅವರ ಕನಸುಗಳನ್ನು ಮುಂದುವರಿಸಲು ಮತ್ತು ಜಗತ್ತಿಗೆ ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ಅವಕಾಶವನ್ನು ಹೊಂದಿರಬಹುದು, ಆದ್ದರಿಂದ ರಕ್ತದಾನ ಮಾಡುವುದರ ಜೊತೆಗೆ ಹಲವಾರು ಜೀವಗಳಿಗೆ ಮರುಜೀವನ ನೀಡಬಹುದು ಎಂದರು.‌
ವಿಮ್ಸ್ ನಿರ್ದೇಶಕ ಡಾ. ಗಂಗಾಧರಗೌಡ ಮಾತನಾಡಿ,  ವಿಮ್ಸ್ ಆಸ್ಪತ್ರೆ ಮತ್ತು ಟ್ರಾಮ್ ಕೇರ್ ಸೆಂಟರ್‌ನಲ್ಲಿ ಇರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ವಿವರಿಸಿ, ಮೇ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿರುವ ‘ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆ ಬಗ್ಗೆ ಮಾಹಿತಿ ನೀಡಿದರು.
ಡಾ. ಬಿಂದುರಾಣಿ, ಮೆಡಿಕಲ್ ಆಫೀಸರ್, ರಕ್ತ ಭಂಡಾರ ಅಧಿಕಾರಿಗಳು, ವಿಮ್ಸ್ ಇವರು ರಕ್ತದ ಮಹತ್ವವನ್ನು ತಿಳಿಸಿ, ರಕ್ತದ ಗುಂಪುಗಳು, ಅದರಿಂದ ಆಗುವ ಪ್ರಯೋಜನೆಗಳ ಮಾಹಿತಿ ನೀಡಿದರು.
137 ಬಾರಿ ರಕ್ತದಾನ ಮಾಡಿರುವ ಡಾ. ನಾಗರಾಜ್, ನಿವೃತ್ತ ರೇಡಿಯೋಲಾಜಿಸ್ಟ್, ಬಳ್ಳಾರಿ ವಿದ್ಯಾರ್ಥಿಗಳಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬಿಐಟಿಎಂ ಕಾಲೇಜಿನ ಪ್ರಾಚಾರ್ಯ ಡಾ. ಯಡವಳ್ಳಿ ಬಸವರಾಜ್ ಮಾತನಾಡಿ,  ಅಪಘಾತಗಳಲ್ಲಿ ಹಾಗೂ ಇತರ ಆಪರೇಷನ್ ಸಮಯಗಳಲ್ಲಿ ರಕ್ತದ ಅವಕಾಶ ಸಾಕಷ್ಟು ಇರುವುದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಿ ಪ್ರಾಣಗಳನ್ನು ರಕ್ಷಿಸೋಣ ಎಂದು ಕರೆ ನೀಡಿದರು.
ಡಾ. ವಿ.ಜೆ. ಭರತ್, ಟ್ರಸ್ಟಿ, ಟಿಇಹೆಚ್‌ಆರ್‌ಡಿ ಟ್ರಸ್ಟ್, ಬಳ್ಳಾರಿ, ಡಾ. ಬಿ.ಎಸ್. ಖೇಣೇದ್, ಉಪ-ಪ್ರಾಚಾರ್ಯರು, ಬಿಐಟಿಎಂ, ಡಾ. ಉದಯ್ ಶಂಕರ್, ಪ್ಯಾಥಾಲಜಿ ವಿಭಾಗ, ಪೋಲಾ ವಿಕ್ರಂ, ಐಆರ್‌ಸಿಎಸ್, ಬಳ್ಳಾರಿ,  ದೇವಣ್ಣ, ಛೇರ್‌ಮನ್ ಪ್ರೋಗ್ರಾಮಿಂಗ್ ಕಮಿಟಿ, ಐಆರ್‌ಸಿಎಸ್, ಬಳ್ಳಾರಿ, ಡಾ. ನರಸಿಂಹ ಮೂರ್ತಿ, ಮೆಡಿಕಲ್ ಆಫೀಸರ್, ಎನ್‌ಯುಹೆಚ್‌ಎಂ, ರೇಡಿಯೋಪಾರ್ಕ್, ಬಳ್ಳಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿ.ಅಮರೇಶಯ್ಯ, ಆಡಳಿತಾಧಿಕಾರಿಗಳು, ಬಿಐಟಿಎಂ, ಬಳ್ಳಾರಿ, ಡಾ. ಶೇಕ್‌ಮೀರ, ಎನ್‌ಎಸ್‌ಎಸ್ ಇನ್‌ಚಾರ್ಜ್, ಅಶೋಕ್, ಎನ್‌ಎಸ್‌ಎಸ್ ಪ್ರೋಗ್ರಾಮ್ ಆಫೀಸರ್, ಬಸವರಾಜ್ ಬಿಸಲಹಳ್ಳಿ, ಆಧೀಕ್ಷಕರು, ಪಂಪಾಪತಿ ಹೆಚ್.ಎಂ, ಮಾರೆಪ್ಪ, ವೀರೇಶ್  ಉಪಸ್ಥಿತಿಯಲ್ಲಿ 183 ವಿದ್ಯಾರ್ಥಿಗಳು ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯವರು ರಕ್ತದಾನ ಮಾಡಿದರು.
ಡಾ. ವೀಣಾ ಸ್ವಾಗತಿಸಿದರು, ಸಾಯಿನಾಥ್ ಪ್ರಾರ್ಥಿಸಿದರು ಹಾಗೂ ಪ್ರೊ.ಸುಶೀಲ ಬಾಯಿ,  ವಂದನಾರ್ಪಣೆ ಮಾಡಿದರು.