ಬಸವರಾಜು ವಿ ಶಿವಗಂಗಾ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಬಿಜೆಪಿ ಮುಖಂಡರು

ಚನ್ನಗಿರಿ.ಡಿ.೨೭; ಬಿಜೆಪಿ ದುರಾಡಳಿತ, ನಡವಳಿಕೆಯಿಂದ ಬೇಸತ್ತು ಆ ಪಕ್ಷದ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು. ತಾಲ್ಲೂಕಿನ ಪಾಂಡೊಮಟ್ಟಿಯಲ್ಲಿ ಬಿಜೆಪಿ ಮುಖಂಡರಾದ ಸೊರೆಕಾಯಿ ಕುಮಾರ್,  ಶಶಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷಕ್ಕೆ ಬರ ಮಾಡಿಕೊಂಡ ಬಸವರಾಜು ವಿ ಶಿವಗಂಗಾ ಕಾಂಗ್ರೆಸ್ ಪಕ್ಷದ ಸಿದ್ಧಂತ ಒಪ್ಪಿಕೊಂಡು ಸಾಕಷ್ಟು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬರುತ್ತಿದ್ದಾರೆ. ಈ ದೇಶದಲ್ಲಿ ಬಿಜೆಪಿ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ ಭರವಸೆಗಳನ್ನ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಅವರ ಆಡಳಿವನ್ನ ಬಿಜೆಪಿ ಪಕ್ಷದವರೇ ತಿರಸ್ಕಾರ ಮಾಡುವಂತಾಗಿದೆ. ಇದೀಗ ಚನ್ನಗಿರಿ ತಾಲ್ಲೂಕ್ ಲ್ಲಿ ಬಿಜೆಪಿಯಿಂದ ಸಾಕಷ್ಟು ಮಂದಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ದನೆಗೆ ಒಗ್ಗಾಟ್ಟಿನಿಂದ ಕೆಲಸ ಮಾಡಬೇಕಿದೆ ಮುಂದಿನ ವಿಧಾನಸಭೆ ಯಾವಾಗಾದರೂ ಬರಬಹುದು ಈ ದೃಷ್ಟಿಯಿಂದ ಪಕ್ಷದ ಮುಖಂಡರು ಬೂತ್ ಮಟ್ಟದಿಂದ ಇಂದಿನಿಂದಲೇ ಕೆಲಸ ಮಾಡಬೇಕು. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚು ಸ್ಥಾನ ಗೆಲ್ಲುತ್ತಾರೆ ಯಾವುದೇ ಸಂಶಯವಿಲ್ಲ ಎಂದು ಬಸವರಾಜು ವಿ ಶಿವಗಂಗಾ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ  ಶೈಲೇಶ್ ಪಾಟೀಲ್, ಬಸವರಾಜಪ್ಪ ಗೌಡ್ರು, ಆಕಾಶ್, ತಾಲ್ಲೂಕ್ ಕಿಸಾನ್ ಕಾಂಗ್ರೆಸ್  ಭರತ್ ಪಾಟೀಲ್ ಸೇರಿದಂತೆ ಕಾಂಗ್ರೆಸ್ ಹಲವು ನಾಯಕರು ಉಪಸ್ಥಿತರಿದ್ದರು.