ಬಸವರಾಜಪ್ಪ ಅಪ್ಪ ಅಗಲಿಕೆಗೆ ಸಂತಾಪ

ಕಲಬುರಗಿ:ಎ.21:ಶರಣಬಸವೇಶ್ವರ ಸಂಸ್ಥಾನದ ಲಿಂ. ಪರಮಪೂಜ್ಯ ದೊಡ್ಡಪ್ಪ ಅಪ್ಪ ಅವರ ದ್ವಿತೀಯ ಪುತ್ರ ಪೂಜ್ಯ ಬಸವರಾಜಪ್ಪ ಅಪ್ಪ ಅವರ ಅಕಾಲಿಕ ನಿಧನಕ್ಕೆ ಜಿಲ್ಲೆಯ ಮಠಾಧಿಪತಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಅಧ್ಯಕ್ಷರೂ ಆಗಿದ್ದ ಅವರು ವೀರಶೈವ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಿದ್ದರು. ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು, ಸ್ಟೇಶನ್ ಬಬಲಾದನ ಶಿವಮೂರ್ತಿ ಶಿವಾಚಾರ್ಯರು, ತಪೋವನ ಮಠದ ಡಾ. ಸಿದ್ಧರಾಮ ಶಿವಾಚಾರ್ಯರು, ಓಂಕಾರ ಬೇನೂರಿನ ಸಿದ್ಧರೇಣುಕ ಶಿವಾಚಾರ್ಯರು, ಅಚಲೇರಿಯ ಸೂತ್ರೇಶ್ವರ ಶಿವಾಚಾರ್ಯರು, ತೊನಸನಹಳ್ಳಿ ಶ್ರೀಗಳು, ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ ಹಾಗೂ ಬಾಬುರಾವ ಕೋಬಾಳ ಸಂತಾಪ ಸೂಚಿಸಿ ಬಸವರಾಜಪ್ಪ ಅಪ್ಪ ಅವರ ಅಗಲಿಕೆಯಿಂದ ವೀರಶೈವ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶ್ರೀ ಪಾರ್ವತಿ ಪರಮೇಶ್ವರರು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಚಿರಶಾಂತಿ ನೀಡಲೆಂದು ತಿಳಿಸಿದ್ದಾರೆ.