ಬಸವಭೂಷಣ ಪ್ರಶಸ್ತಿಗೆ ಆಯ್ಕೆ

ವಿಜಯಪುರ, ನ.19-ಬಸವನಬಾಗೇವಾಡಿಯ ಬಸವ ಜನ್ಮಭೂಮಿ ಪ್ರತಿಷ್ಠಾನ ನೀಡುವ ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿಗೆ ಇಲ್ಲಿನ ಬಾಲಕರ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ, ಸಾಹಿತಿ ನಾರಾಯಣ ಬಾಬಾನಗರ ಆಯ್ಕೆಯಾಗಿದ್ದಾರೆ.
ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿರುವ ದಶಮಾನೋತ್ಸವ ಹಾಗೂ ರಾಜ್ಯಮಟ್ಟದ ವಚನ ವೈಭವ ಕಾರ್ಯಕ್ರಮದಲ್ಲಿ ನಾರಾಯಣ ಬಾಬಾನಗರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ಡಾ. ಮುರುಗೇಶ ಸಂಗಮ ತಿಳಿಸಿದ್ದಾರೆ.