ಬಸವಭವನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

ಸಿರುಗುಪ್ಪ, ಜ.02: ನಗರದ ಬಸವ ಭವನದಲ್ಲಿ ಶ್ರೀ ರಾಜಪ್ಪ ಶರಣರ ನೇತೃತ್ವದಲ್ಲಿ ಬಸವ ಬಳಗದ ವತಿಯಿಂದ ವರ್ಷದ ಹರ್ಷ ಕಾರ್ಯಕ್ರಮದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು.
ನಂತರ ರಾಜಪ್ಪ ಶರಣರು ಆಶೀರ್ವಚನದಲ್ಲಿ ನಮ್ಮ ದೇಶದ ಸಂಸ್ಕೃತಿಯು ಹೊರ ದೇಶಕ್ಕೆ ಮಾದರಿಯಾಗಿದ್ದು, ಇಂದಿನ ಯುವಕರು ನಮ್ಮ ಸಂಸ್ಕೃತಿ, ಆಚಾರ ವಿಚಾರ, ನಡೆ ನುಡಿಗಳನ್ನು ಮೈಗೂಡಿಸಿಕೊಳ್ಳದೇ ವಿದೇಶಿ ಸಂಸ್ಕೃತಿಗೆ ಮಾರು ಹೋಗಿದ್ದು ಇದರಿಂದ ಭಾರತ ದೇಶದ ಸಂಸ್ಕೃತಿಯನ್ನು ಹೊರ ದೇಶದವರು ನೆಚ್ಚಿಕೊಂಡು ಅಳವಡಿಸಿಕೊಳ್ಳುತ್ತಿದ್ದಾರೆ ಆದ್ದರಿಂದ ನಾವು ಪಾಶ್ಚ್ಯಾತೀಕರಣದೆಡೆಗೆ ಮಾರು ಹೋಗದೇ ನಮ್ಮ ಶರಣರ, ಸಾಧು ಸಂತರ, ವಚನಾಕಾರರ ನಡೆ, ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುವಂತಹ ಕಾರ್ಯ ಮಾಡಬೇಕೆಂದು ಯುವಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗುರುಬಸವ ಮಠದ ಬಸವಭೂಷಣ ಸ್ವಾಮಿ, ಬಸವ ಬಳಗದ ಅಧ್ಯಕ್ಷ ಶಿವಪ್ರಕಾಶ, ಬೆಂಗಳೂರಿನ ಇಂಜಿನಿಯರ್ ಉದಯ ಕುಮಾರ್ ನಿಯರ್, ಮುಖಂಡರಾದ ಶಿವಕುಮಾರ ಬಳಿಗಾರ್, ಮಲ್ಲಿಕಾರ್ಜುನಗೌಡ, ವಿರುಪಾಕ್ಷಿಗೌಡ, ಇದ್ದರು.