ಬಸವಪ್ರಭು ಶ್ರೀಗಳಿಂದ ಬಾಡಾ ಆನಂದರಾಜುಗೆ ಸನ್ಮಾನ


ದಾವಣಗೆರೆ.ನ.೨೭ : ಶೋಷಿತ ವರ್ಗದ ದನಿ, ಹಿಂದುಳಿದವರ ನಾಯಕರಾದ ಬಾಡದ ಆನಂದರಾಜು ಅವರಿಗೆ ನಗರದ ವಿರಕ್ತ ಮಠದ ಬಸವಪ್ರಭು ಮಹಾಸ್ವಾಮೀಜಿಗಳು ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬಸವಣ್ಣನವರ ವಚನಗಳಿಂದ ಆಶೀರ್ವದಿಸಿ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು. 49 ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶ್ರೀಗಳು ಮಠದಲ್ಲೇ ವಿಶೇಷವಾಗಿ ಆಹ್ವಾನಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ಶ್ರೀಗಳು ಬಾಡದ ಆನಂದರಾಜು ಅವರು ಶ್ರೀ ಮಠದ ಭಕ್ತರು ಹಿರಿಯ ಗುರುಗಳು ಸೇರಿದಂತೆ ತಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇತ್ತೀಚೆಗೆ ಚಿತ್ರದುರ್ಗದ ಮುರಘಾಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದರು ಅಲ್ಲದೇ ಆದರ್ಶ ದಂಪತಿ ಎಂದು ಮಠದಿಂದ ಸನ್ಮಾನಿಸಲಾಗಿದೆ ಎಂದರು. ಸಮಾಜದಲ್ಲಿ ಸಾಮಾಜಿಕವಾಗಿ ಕಾರ್ಯ ಮಾಡುವ ವ್ಯಕ್ತಿಗಳಲ್ಲಿ ಆನಂದರಾಜು ವಿಭಿನ್ನರಾಗಿದ್ದಾರೆ ಯಾರು ಸಮಾಜದಲ್ಲಿ ಅಶಕ್ತರಾಗಿದ್ದಾರೆ ಅಂತವರ ಪರವಾಗಿ ಹೋರಾಟ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಯಾವುದೇ ಅಧಿಕಾರ ಆಡಳಿತ ಇಲ್ಲದಿದ್ದರು ತಮ್ಮ ವೈಯುಕ್ತಿಕ ಶಕ್ತಿಯಿಂದ ಸೇವೆ ಮಾಡುತ್ತಿದ್ದಾರೆ ಇದು ಅವರ ದೊಡ್ಧಗುಣ ಅದೇರೀತಿ ಕೋರುನಾ ಎಂಬ ಸಂಕಷ್ಟದಲ್ಲಿ ದಣಿವರಿಯದೇ ಬಡವರ ಸೇವೆ ಮಾಡಿದ್ದಾರೆ ಎಂದು ಬಸವಪ್ರಭು ಮಹಾಸ್ವಾಮೀಜಿಗಳು ಹೇಳಿದರು. ಅವರ ಜನ್ಮದಿನದಂದು ಆಶೀರ್ವಾದಿಸಿ ಅವರ ಜೀವನ ಸುಖವಾಗಿರಲೆಂದು ಮಠ ಆಶಿಸುತ್ತದೆ ಎಂದರು.  ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ನಾಗರಾಜ್ ಲೋಕಿಕೆರೆ ಮಾಜಿ ಮೇಯರ್ ಅಜಯ್ ಕುಮಾರ್ ಸೇರಿದಂತೆ ಗೆಳೆಯರ ಬಳಗ ಕೂಡ ಉಪಸ್ಥಿತರಿದ್ದು ಶುಭಕೋರಿದರು. ಬಳಿಕ ಎಲ್ಲರೂ ಶ್ರೀಗಳನ್ನ ಸನ್ಮಾಸಿ ಗೌರವಿಸುವ ಮೂಲಕ ಭಕ್ತಿ ಸಮರ್ಪಿಸಲಾಯಿತು. ಈ ವೇಳೆ ಮಾಜಿ ಉಪ ಮಹಾಪೌರರಾದ ಶ್ರೀಮತಿ ಸೌಮ್ಯ ನರೇಂದ್ರಕುಮಾರ್.ಎಸ್.ಪಿ ಶ್ರೀನಿವಾಸ್. ಎಸ್.ಮುರುಳಿಯಾದವ್.ಮಹಾ ನಗರ ಪಾಲಿಕೆ ಸದಸ್ಯ ಮಂಜುನಾಯ್ಕ್ ಮಹಿಳಾ ಮುಖಂಡರಾದ ಶ್ರೀಮತಿ ಸಲೀನಾ.ರಾಜು ಮಠದ್ ಇತರರಿದ್ದರು.
Attachments areaReplyReply to allForward