ಬಸವನಾಡಿನಲ್ಲಿ ಶರಣು ಸಲಗರ್ ವಿಜಯ ಯಾತ್ರೆ

ಬೀದರ, ಮೇ 2: ಬೀದರ್ ಜಿಲ್ಲೆಯ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಕ್ಷೇತ್ರವನ್ನು ಬಿಜೆಪಿ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಫಲಿತಾಂಶದ ಅಧಿಕೃತ ಘೋಷಣೆ ಬಾಕಿಯಿದೆ.

ಶರಣು ಸಲಗರ ಅವರು 20,448 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ. ನಾರಾಯಣರಾವ್ ಅವರನ್ನು ಸೋಲಿಸಿದ್ದಾರೆ. ಶರಣು ಸಲಗರ 70,556 ಮತಗಳನ್ನು ಗಳಿಸಿದರೆ, ಮಾಲಾ ನಾರಾಯಣರಾವ್ 50,108 ಮತಗಳನ್ನು ಗಳಿಸಿದ್ದರು. ಜೆಡಿಎಸ್ ಅಭ್ಯರ್ಥಿ ಸೈಯದ್ ಅಲಿ 9,390 ಮತಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದಾರೆ.

ಬಸವ ಕಲ್ಯಾಣ ಶಾಸಕರಾಗಿದ್ದ ಕಾಂಗ್ರೆಸ್ ನ ಬಿ.ನಾರಾಯಣ ರಾವ್ ಅವರು ಕೋವಿಡ್‌ ಹಾಗೂ ಬಹುಅಂಗಾಂಗ ವೈಫಲ್ಯದಿಂದ 2020ರ ಸೆಪ್ಟಂಬರ್‌ 24 ರಂದು ನಿಧನರಾಗಿದ್ದರು.ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆದಿತ್ತು.
ಕಾಂಗ್ರೆಸ್ ಪಕ್ಷವು ನಾರಾಯಣ ರಾವ್ ಅವರ ಪತ್ನಿ ಮಾಲಾ ಬಿ. ನಾರಾಯಣ ರಾವ್ ಅವರನ್ನು ಕಣಕ್ಕಿಳಿಸಿತ್ತು. ಬಿಜೆಪಿಯಿಂದ ಶರಣು ಸಲಗರ ಕಣಕ್ಕಿಳಿದಿದ್ದರೆ, ಜೆಡಿಎಸ್ ನಿಂದ ಸೈಯದ್ ಅಲಿ ಸ್ಪರ್ಧಿಸಿದ್ದರು.