ಬಸವನಕೋಟೆ ಗ್ರಾ.ಪಂ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

ಸಂಜೆವಾಣಿ ವಾರ್ತೆ

ಜಗಳೂರು.ಆ.8:ತಾಲೂಕಿನ ಬಸವನಕೋಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರೇಖಾ ತಿಮ್ಮೇಶ್ ಉಪಾಧ್ಯಕ್ಷರಾಗಿ ಲಲಿತಮ್ಮ ಗಾದ್ರೆಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು.ಒಟ್ಟು 13 ಜನ ಸದಸ್ಯರಿದ್ದು ಎಸ್ ಸಿ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಾಮಾನ್ಯ ಮಹಿಳಾ ಮೀಸಲು ಸ್ಥಾನಕ್ಕೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದು.ನಾಮಪತ್ರ ಊರ್ಜಿತವಾಗಿದ್ದು.ಯಾರೊಬ್ಬರೂ ಸ್ಪರ್ದಿಸದ ಹಿನ್ನೆಲೆ 8ಜನ ಸದಸ್ಯರ ಬೆಂಬಲದೊಂದಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ತೋಟಗಾರಿಕೆ‌ ಇಲಾಖೆ ಪ್ರಭಾರಿ ಸಹಾಯಕ ನಿರ್ದೆಶಕ ರಾಜೇಶ್ ಅವರು ಘೋಷಿಸಿದರು.ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರಾದ ಎಸ್.ಜ್ಯೋತಿಲಿಂಗಪ್ಪ,ಎಸ್.ಬಿ.ಶರಣಪ್ಪ,ಸುನಿತಾ ಸಿದ್ದೇಶ್,ನಗೀನಬಾನುಸಮಿವುಲ್ಲಾ,ರೇಖಾ ಕೊಟ್ರೇಶ್, ಕೆ.ಎಚ್.ಕೊಟ್ರೇಶಪ್ಪ,ಸಣ್ಣಜ್ಜಪರ್,ಮುಖಂಡರಾ ಪ್ರಭು,ಉದ್ದಬೋರನಹಳ್ಳಿ ಕೊಟ್ರೇಶ್,ಸಿದ್ದೇಶ್,ಕಡೇಮನಿ ಕೊಟ್ರೇಶ್,ಪಿಡಿಓ ಬಸವರಾಜ್,ಬಿಲ್ ಕಲೆಕ್ಟರ್ ಕರಿಬಸಪ್ಪ,ಸೇರಿದಂತೆ ಇದ್ದರು.