ಬಸವದಳ ಬಲಪಡಿಸುವಲ್ಲಿ ಗುಂಪುಗಾರಿಕೆ ಸಲ್ಲ

ಬಸವಕಲ್ಯಾಣ:ನ.1: ರಾಷ್ಟ್ರೀಯ ಬಸವ ದಳ ಬಲಪಡಿಸಬೇಕು. ದೇಶಾದ್ಯಂತ ಸಂಘಟನೆಗಳನ್ನು ಅಧಿಕ ಮಾಡಬೇಕು ವಿನಃ ಬಸವ ದಳ ಬಲಪಡಿಸುವ ನೆಪದಲ್ಲಿ ಗುಂಪುಗಾರಿಕೆ ಮಾಡಿದರೆ, ವಿಶ್ವಗುರು ಬಸವಣ್ಣನವರ ಅವಕೃಪೆಗೆ ನಾವೆಲ್ಲ ಪಾತ್ರರಾಗಬೇಕಾಗುತ್ತದೆ ಎಂದು ಕೂಡಲ ಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಶ್ರೀ ಜಗದ್ಗುರು ಡಾ.ಮಾತೆ ಗಂಗಾದೇವಿ ಹೇಳಿದರು.

ನಗರದ ಬಸವ ಮಹಾಮನೆ ಆವರಣದಲ್ಲಿ ಹಮ್ಮಿಕೊಂಡ 19ನೇ ಕಲ್ಯಾಣ ಪರ್ವ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಬಸವದಳ ಮತ್ತು ಬಸವ ಧರ್ಮ ಪೀಠ ಎರಡು ನಮಗೆ ಬೇಕು. ಆದರೆ ರಾಷ್ಟ್ರೀಯ ಬಸವ ದಳದಲ್ಲಿ ಇದ್ದುಕೊಂಡು ಗುಂಪುಗಾರಿಕೆ ಮಾಡುತ್ತೆನೆ ಎಂಬ ಭ್ರಮೆಯಲ್ಲಿದ್ದರೆ ಮೊದಲು ಅದನ್ನು ತೆಗೆದು ಹಾಕಿ ಎಂದರು. ನಿಮ್ಮ ನಿಮ್ಮ ವೈಯಕ್ತಿಕ ದ್ವೇಷಗಳು ಸಂಘಟನೆಯಲ್ಲಿ ತರಬಾರದು ಎಂದರು.
ಸಂಪ್ರದಾಯ ವಾದಿಗಳು ವಚನ ಸಾಗಿತ್ಯ ಸಹಿಸಿಕೊಳ್ಳಲಿಲ್ಲ. ವಚನ ಸಾಹಿತ್ಯ ಸುಟ್ಟು ಹಾಕಿದ್ದರು ಹೀಗಾಗಿ ಕಲ್ಯಾಣದಲ್ಲಿ ಕ್ರಾಂತಿ ಆಯಿತು. ನಂತರ ಮತ್ತೆ ಶ್ರೀ ಲಿಂಗಾನಂದ ಅಪ್ಪಾಜಿ ಹಾಗೂ ಲಿಂ.ಜಗದ್ಗುರು ಮಾತೆ ಮಹಾದೇವಿ ಅವರ ಸಂಘಟನೆ ಮಾಡಿ ಹೋಗಿದ್ದಾರೆ. ಹೀಗಾಗಿ ನಾವೆಲ್ಲರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಜಗತ್ತಿಗೆ ಏನಾದರೂ ಸಂದೇಶ ನೀಡಲು ಸಾಧ್ಯ ಎಂದರು.

ಬೆಂಗಳೂರು ಶ್ರೀ ಚನ್ನಬಸಬೇಶ್ವರ ಜ್ಞಾನಪೀಠದ ಶ್ರೀ ಜಗದ್ಗುರು ಚನ್ನಬಸವನಾಂದ ಸ್ವಾಮೀಜಿ ಮಾತನಾಡಿ, ಮಾತಾಜಿ ಅವರು ತ್ರಿವಿಧ ದಾಸೋಹ ಜತೆಗೆ, ಸಮಯ, ಪ್ರಾಣ ಮತ್ತು ಅಭಿಮಾನ ತೋರಿಸಿಕೊಟ್ಟು ಹೋಗಿದ್ದಾರೆ. ಹೀಗಾಗಿ ಪ್ರಾಣದ ಹಂಗು ತೊರೆದು ಇಷ್ಟೊಂದು ಸಂಖ್ಯೆಯಲ್ಲಿ ಕಲ್ಯಾಣ ಪರ್ವದಲ್ಲಿ ಭಾಗವಹಿಸಿರುವುದಕ್ಕೆ ತುಂಬಾ ಸಂತೋಷ ಎಂದರು.

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಜಗತ್ತಿಗೆ ಲೆಸನ್ನೆ ಬಯಿಸಿದ್ದ ಭೂಮಿ ಬಸವಕಲ್ಯಾಣವಾಗಿದೆ. ಕೋವಿಡ್ ಲಕ್ಷಾಂತರ ಜನರ ಪ್ರಾಣ ತೆಗೆದುಕೊಂಡಿದ್ದರು, ಅದನ್ನು ಮರೆತು 19ನೇ ಕಲ್ಯಾಣ ಪರ್ವಕ್ಕೆ ನಿರೀಕ್ಷೆಗೆ ಮೀರಿ ಬಸವ ಭಕ್ತರು ಆಗಮಿಸಿರುವುದು ನೋಡಿದರೆ ಕಲ್ಯಾಣದ ಶಕ್ತಿ ಗೊತ್ತಾಗುತ್ತದೆ ಎಂದು ಹೇಳಿದರು.

ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವಲ್ಲಿ ಉತ್ಸಾಹ ತೋರಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೆಲಸ ಆರಂಭಿಸುವಲ್ಲಿ ತೋರಬೇಕು ಎಂದರು. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಈಗಾಗಲೇ ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ರಾಜ್ಯಗಳಲ್ಲಿ ಹೋರಾಟ ಮಾಡುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಾಯಿಸಲಾಗುತ್ತದೆ ಎಂದರು.

ಗೀತಾ ಚಿದ್ರಿ ಹಾಗೂ ಗೌರಮ ಬಿ.ನಾರಾಯಣರಾವ್‌ ಮಾತನಾಡಿದರು. ಶ್ರೀ ಜಗದ್ಗುರು ಮಾತೆ ಜ್ಞಾನೇಶ್ವರಿ ಮತ್ತು ದಾನೇಶ್ವರಿ ಧರ್ಮಗುರು ಪೂಜೆ ನೆರವೇರಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂಗೇರಿ ಅಧ್ಯಕ್ಷತೆ ವಹಿಸಿದ್ದರು. ಬಸವಕಲ್ಯಾಣ ಅಲ್ಲಮಪ್ರಭು ಶೂನ್ಯಪೀಠದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಮಹಾಮನೆ ಬಸವ ಪ್ರಭು ಸ್ವಾಮೀಜಿ, ಮಾಲಾ ಬಿ.ನಾರಾಯಣರಾವ್‌, ಶಿವರಾಜ ಪಾಟೀಲ ಅತಿವಾಳ, ಬಸವರಾಜ ಪಾಟೀಲ ಶಿವಪೂರ,

ಶಿವರಾಜ ನರಶೆಟ್ಟಿ, ಶಾಂತಾ ಎಸ್‌.ಬಿರಾದಾರ್‌, ಶೀಲಾ ಸೋಮಶೇಕರ ಪಾಟೀಲ, ಮೇನಕಾ ನರೇಂದ್ರ ಪಾಟೀಲ, ಸರಸ್ವತಿ ಖಂಡ್ರೆ ಮತ್ತಿತರರು ಇದ್ದರು.