ಬಸವತೀರ್ಥ ವಿದ್ಯಾಪೀಠ ಸೇವಕರಿಂದ ಆಹಾರ ಧಾನ್ಯ ವಿತರಣೆ

(ಸಂಜೆವಾಣಿ ವಾರ್ತೆ)
ಬೀದರ:ಜೂ.11: ಹುಮನಾಬಾದ್ ತಾಲೂಕಿನ ಹಳ್ಳೀಖೇಡ್(ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಶಾಲಾ-ಕಾಲೇಜಿನ ಸ್ವಯಂ ಸೇವಕರಿಂದ
ಸೇವಾ ಇಂಟರ್‍ನ್ಯಾಶ್ನಲ್ ಬೆಂಗಳೂರಿನವರು ನೀಡಿರುವ 100 ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸಲಾಯಿತು.
ಹಳ್ಳೀಕೇಡ್ ಗ್ರಾಮದ ಸುತ್ತಲಿನ ಗ್ರಾಮಗಳ ನಿರ್ಗತಿಕರು, ಬಡವರು, ಕೋವಿಡ್‍ನಿಂದ ನೈಜ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಈ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಬಸವತೀರ್ಥ ವಿದ್ಯಾಪೀಠದ ಗೌರೀಶ ತೀರ್ಥಾ ಅವರ ನೇತೃತ್ವದಲ್ಲಿ ಇಲ್ಲಿಯ ಸ್ವಯಂ ಸೇವಕರು ವಿವಿಧ ರೀತಿಯ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.
ಕೈಗೆ ಕೆಲಸವಿಲ್ಲದೇ ಜೀವನ ನಡೆಸುವುದು ಕಷ್ಟವೆಂದು ಭಾವಿಸಿ ನಿಸ್ಸಾಹಾಯಕರಾಗಿದ್ದ ಜನರ ಮನೆ ಬಾಗಿಲಿಗೆ ವಿದ್ಯಾಪೀಠದ ಕಾರ್ಯಕರ್ತರು ತೆರಳಿ ವಿತರಣೆ ಮಾಡಿದ್ದು ಸ್ಥಳಿಯರ ಮೆಚ್ಚುಗೆಗೆ ಪಾತ್ರವಾಗಿದೆ. ನಗರ ಪ್ರದೇಶಗಳಲ್ಲಿ ಅನೇಕ ಸಂಘ, ಸಂಸ್ಥೆಗಳು ಬಡಜನರ ಕೈ ಹಿಡಿದಿದ್ದು ಗ್ರಾಮೀಣರ ಕಡೆ ಯಾರೂ ಸಹ ಸಹಾಯಕ್ಕೆ ಬಾರದ ಈ ಸನ್ನಿವೇಶದಲ್ಲಿ ಬಸವತೀರ್ಥ ವಿದ್ಯಾಪೀಠ ಇಂತಹ ಪೂಣ್ಯ ಕಾರ್ಯಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಸಂಕಷ್ಟಕ್ಕೊಳಗಾದ ಜನರ ಅಭಿಪ್ರಾಯವಾಗಿದೆ.